ಅಪ್ರಾಪ್ತ ಬಾಲಕಿಮೇಲೆ ಅತ್ಯಾಚಾರ

ಅಪ್ರಾಪ್ತ ಬಾಲಕಿಮೇಲೆ ಅತ್ಯಾಚಾರ

ನವದೆಹಲಿ,ಆ.01: ಮೂರು ವರ್ಷದ ಬಾಲಕಿಯನ್ನು ಅಪಹರಿಸಿ ಕಾಮುಕರು ಬಾಲಕಿಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ರುಂಡವನ್ನೆ ಕತ್ತರಿಸಿದ ಭೀಕರ ಘಟನೆ ಜಾರ್ಖಂಡ್ ನ ಜಮ್ಶೆಡ್ಪುರ್ನಲ್ಲಿ ನೆಡೆದಿದೆ.
ಟಾಟಾನಗರ್ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಮೂರು ವರ್ಷದ ಬಾಲಕಿಯನ್ನು ಮೂವರು ಅಪಹರಣ ಮಾಡಿದ್ದರು. ಬಾಲಕಿ ಕಾಣದೆ ಹೆತ್ತವರು ದೂರು ದಾಖಲಿಸಿದ ಹಿನ್ನಲೆಯಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಬಾಲಕಿಯ ತಲೆಯಿಲ್ಲದ ದೇಹ ಜಮಶೆಡ್ಪುರದ ಹೊರ ಭಾಗದಲ್ಲಿ ದೊರೆತಿದೆ ಶ್ವಾನ ದಳದ ಸಹಾಯದಿಂದ ಬಾಲಕಿಯ ತಲೆಯನ್ನು ಪತ್ತೆ ಮಾಡಲಾಗಿದೆ.
ಮರಣೋತ್ತರ ಪರೀಕ್ಷೆ ವೇಳೆ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ವಿಚಾರ ತಿಳಿದುಬಂದಿದೆ, ಆರೋಪಿಗಳು ಪರಾರಿಯಾಗಿದ್ದು ಇವರನ್ನು ಹುಡುಕಲು ಪೋಲಿಸರು ಬಲೆ ಬೀಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos