ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಂಸದ ಡಿ.ಕೆ ಸುರೇಶ್ ಗೆಲುವಿಗೆ ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಡಿಕೆ ಶಿವಕುಮಾರ್ ಚನ್ನಪಟ್ಟಣದಲ್ಲೇ ಹೆಚ್‌ಡಿಕೆಗೆ ಶಾಕ್ ಕೊಟ್ಟಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಖೆಡ್ಡಾ ತೋಡಿದ್ದಾರೆ. ಒಕ್ಕಲಿಗ ಅಸ್ತ್ರ ಹೂಡಿ, ದಳಪತಿಗಳ ಸಾಮ್ರಾಜ್ಯವನ್ನೇ ಶೇಕ್ ಮಾಡಿದ್ದ ಡಿಕೆ ಶಿವಕುಮಾರ್, ನಿನ್ನೆ ತಡರಾತ್ರಿ ಆಪರೇಷನ್ ಹಸ್ತದ ಮೂಲಕ ಮತ್ತೆ ಶಾಕ್ ಕೊಟ್ಟಿದ್ದಾರೆ. ತಮ್ಮ ಡಿಕೆ ಸುರೇಶ್ ಗೆಲುವಿಗಾಗಿ ರಾತ್ರೋರಾತ್ರಿ ಆಪರೇಷನ್ ಮಾಡಿರುವ ಡಿಕೆ ಶಿವಕುಮಾರ್, 300ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದಾರೆ.
ಇಂದು ಚನ್ನಪಟ್ಟಣ ಭಾಗದ 300ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈಗಾಗಲೇ ಮಾಗಡಿ, ರಾಮನಗರ, ಚನ್ನಪಟ್ಟಣ ಭಾಗದ 4 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸೇರಿಕೊಂಡಿದ್ದಾರೆ. ಬಹುತೇಕ ಕುಮಾರಸ್ವಾಮಿ ಆಪ್ತರೇ ನಮ್ಮ ಪಕ್ಷವನ್ನ ಮೆಚ್ಚಿ ಬರ್ತಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಖುದ್ದು ಡಿಕೆ ಅವರೇ ಕಾಂಗ್ರೆಸ್ ಧ್ವಜ ನೀಡಿ ದಳ ಮುಖಂಡರನ್ನು ಸ್ವಾಗತಿಸಿದ್ದಾರೆ. ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಇವರೆಲ್ಲಾರು ಪಕ್ಕಾ ಕುಮಾರಸ್ವಾಮಿ ಬೆಂಬಲಿಗರು. ಪ್ರತಿದಿನ ಸಾವಿರಾರು ಜನ ಕಾಂಗ್ರೆಸ್ ಸೇರ್ತಿದ್ದಾರೆ ಎಂದರು.