30 ಜನರನ್ನು ರಕ್ಷಿಸಿ ಪ್ರಾಣ ತ್ಯಾಗ ಮಾಡಿದ ಸಾಕು ನಾಯಿ

30 ಜನರನ್ನು ರಕ್ಷಿಸಿ ಪ್ರಾಣ ತ್ಯಾಗ ಮಾಡಿದ ಸಾಕು ನಾಯಿ

ನವದೆಹಲಿ, ಏ. 13, ನ್ಯೂಸ್ ಎಕ್ಸ್ ಪ್ರೆಸ್: ಕಟ್ಟಡವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಬೆಂಕಿಯ ಕುರಿತು ಕಟ್ಟಡದಲ್ಲಿದ್ದವರಿಗೆ ಎಚ್ಚರಿಕೆ ನೀಡುವ ಮೂಲಕ ಸಾಕು ನಾಯಿಯೊಂದು 30 ಜನರ ಪ್ರಾಣ ಉಳಿಸಿದೆ.

ಆದರೆ ಅಂತಿಮವಾಗಿ ಸಾಕು ನಾಯಿ ಬೆಂಕಿಗೆ ಸಿಲುಕಿ ಪ್ರಾಣತ್ಯಾಗ ಮಾಡಿದೆ.

ಉತ್ತರ ಪ್ರದೇಶದ ಬಾಂದಾದಲ್ಲಿರುವ 4 ಅಂತಸ್ತಿನ ಕಟ್ಟಡದ ಬೇಸ್ಮೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕಟ್ಟಡದ 3 ಮತ್ತು 4ನೇ ಮಹಡಿಯಲ್ಲಿ ಹಲವು ಕುಟುಂಬಗಳು ವಾಸವಿದ್ದವು. ಬೆಂಕಿ ಬಿದ್ದ ತಕ್ಷಣ ಸಾಕುನಾಯಿ ಜೋರಾಗಿ ಬೊಗಳುವ ಮೂಲಕ ಮನೆಯವರು ಎಚ್ಚೆತ್ತು ಹೊರಗೆ ಬರುವಂತೆ ಮಾಡಿದೆ. ಬೆಂಕಿ ಬಿದ್ದಿರುವುದು ತಿಳಿದ ತಕ್ಷಣ ಕಟ್ಟಡದಲ್ಲಿದ್ದವರು ಹೊರಗೆ ಬರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನಾಯಿಯನ್ನು ಸಿಲಿಂಡರ್ಗೆ ಕಟ್ಟಲಾಗಿತ್ತು. ಬೆಂಕಿಯ ಕೆನ್ನಾಲಿಗೆ ಹೆಚ್ಚಿದಂತೆ ಸಿಲಿಂಡರ್ ಸ್ಫೋಟಗೊಂಡು ನಾಯಿ ಮೃತಪಟ್ಟಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos