ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್‌ ಪಡೆದ ಆಕಾಶ್ ದೀಪ್

ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್‌ ಪಡೆದ ಆಕಾಶ್ ದೀಪ್

ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು.

ರಣಜಿ ಟ್ರೋಫಿಯಲ್ಲಿ ಬಂಗಾಳದ ಪರ ಭರ್ಜರಿ ಪ್ರದರ್ಶನ ನೀಡಿರುವ ಆಕಾಶ್ ದೀಪ್ ಅಂತಿಮವಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ್ದಾರೆ. ಆಕಾಶ್ ದೀಪ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಆಂಗ್ಲ ಬ್ಯಾಟರ್​ಗಳ ಹುಟ್ಟಡಗಿಸಿ 3 ವಿಕೆಟ್ ಕಿತ್ತಿದ್ದಾರೆ.

ಆಕಾಶ್ ದೀಪ್ ರಾಂಚಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಫೆಬ್ರವರಿ 23ರಂದು 27 ವರ್ಷದ ಆಕಾಶ್ ದೀಪ್ ರವರಿಗೆ  ಟೆಸ್ಟ್ ಕ್ಯಾಪ್  ಹಸ್ತಾಂತರಿಸಿದರು.‌

ಜಾಕ್‌ ಕ್ರಾಲೆ ವಿಕೆಟ್ ಪಡೆಯುವ ಮೂಲಕ ಆಕಾಶ್ ಆರಂಭದಲ್ಲಿ ಉತ್ತಮ ಆರಂಭ ಕಂಡರು ಆದರೆ ರಾಂಚಿಯಲ್ಲಿ ನೋಬೆಲ್ ಸೈರನ್ ಸದ್ದು ಮಾಡಿತು ಆಕಾಶ್ ನಿರಾಸೆಗೊಂಡರು ಬಳಿಕ ಕ್ರಾಲೆ  ಮತ್ತೆ ಕ್ರೀಸ್ ಗೆ ತೆರಳಿದರು.  ಆದಾಗಲೂ ಅವರು ತಮ್ಮ ಚೊಚ್ಚಲ ವಿಕೆಟ್ ಗಾಗಿ ಹೆಚ್ಚು ಸಮಯ ಕಾಯಲಿಲ್ಲ ಈ ಘಟನೆಯ ನಂತರ ಆಕಾಶ್ ಬೆನ್ ಡಕೆಟ್ ಮತ್ತು ಒಲ್ವಿ ಪೋಪ್ ಅವರ ಬ್ಯಾಕ್ ಟು ಬ್ಯಾಕ್ ವಿಕೆಟ್ಗಳನ್ನು ಪಡೆದರು.

ಪ್ರಸ್ತುತ ನಡೆಯುತ್ತಿರುವ ಟೆಸ್ಟ್ನಲ್ಲಿ ಇಂಗ್ಲೆಂಡ್ ಪರ ಪ್ರಮುಖ ರನ್ಸ್ ಸ್ಕೋರ್ ಗಳಾಗಿದ್ದಾರೆ ಮತ್ತು ಅವರ ವಿಕೆಟ್ ಪಡೆಯುವುದು ಖಂಡಿತವಾಗಿಯೂ ಚೊಚ್ಚಲ ಆಟಗಾರರಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos