ತೃತೀಯ ಲಿಂಗಿಗೆ ವೋಟರ್ ಐಡಿ

ತೃತೀಯ ಲಿಂಗಿಗೆ ವೋಟರ್ ಐಡಿ

ಬೆಂಗಳೂರು, ಏ. 11, ನ್ಯೂಸ್ ಎಕ್ಸ್ ಪ್ರೆಸ್: ತೃತೀಯ ಲಿಂಗಿಗಳು ಮತದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಆರೋಪಗಳು ಎಲ್ಲೆಡೆ ಇವೆ.

ತೃತೀಯ ಲಿಂಗಿಯೊಬ್ಬರ ವೋಟರ್ ಐಡಿ 11 ಬಾರಿ ತಿರಸ್ಕೃತಗೊಂಡು ಕೊನೆಗೂ 12ನೇ ಬಾರಿಗೆ ಅವರ ಕೈ ಸೇರಿದೆ. ಮತದಾನ ಎಲ್ಲರ ಹಕ್ಕು ಹೌದು, ಆದರೆ ಮತದಾನ ಗುರುತಿನ ಚೀಟಿ ಮಾಡಿಸಲೂ ಕೂಡ ತೃತೀಯ ಲಿಂಗಿಗಳು ಅಷ್ಟೇ ಅಲೆದಾಡಬೇಕಿದೆ. ಅಂತೂ ರಿಯಾನಾ ಅವರಿಗೆ ಗುರುತಿನ ಚೀಟಿ ದೊರೆತಿದೆ.

22 ವರ್ಷದ ರಿಯಾನಾ 2019ರ ಲೋಕಸಭಾ ಚುನಾವಣೆಗೆ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. ಅವರು ಕಳೆದ 3 ವರ್ಷಗಳಿಂದ ಮತದಾರರ ಗುರುತಿನ ಚೀಟಿ ಮಾಡಿಸಲು ಕಷ್ಟ ಪಡುತ್ತಿದ್ದರು. ಪ್ರತಿ ಬಾರಿಯೂ ಅರ್ಜಿ ತಿರಸ್ಕೃತವಾಗುತ್ತಿತ್ತು.ಇದುವರೆಗೂ 11 ಬಾರಿ ತಿರಸ್ಕೃತವಾಗಿದೆ.

ನನಗೆ 18 ವರ್ಷ ಪೂರ್ಣವಾದ ದಿನದಿಂದಲೂ ಗುರುತಿನ ಚೀಟಿ ಮಾಡಿಸಲು ಅಲೆದಾಡುತ್ತಿದ್ದೇನೆ ಆದರೆ ಈ ವರ್ಷ ಗುರುತಿನ ಚೀಟಿ ದೊರೆತಿದೆ” ಎಂದು ಹೇಳಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos