3 ದಿನದ ಆಡು ಹಾಲು ನೀಡುತ್ತಿದೆಯಂತೆ.!

3 ದಿನದ ಆಡು ಹಾಲು ನೀಡುತ್ತಿದೆಯಂತೆ.!

ಬಾಗಲಕೋಟೆ, ಮೇ. 21, ನ್ಯೂಸ್ ಎಕ್ಸ್ ಪ್ರೆಸ್: ಜಗತ್ತಿನಲ್ಲಿ ಪ್ರತಿದಿನ ಒಂದಲ್ಲಾ ಒಂದು ಪವಾಡ ನಡಿತಾನೆ ಇರುತ್ತೆ  ಹೌದು, ಯಾವುದೇ ಪ್ರಾಣಿ ಪ್ರಸವದ ನಂತರ ಹಾಲು ಕೊಡುವುದು ಸಾಮಾನ್ಯ ವಿಚಾರ. ಆದರೆ ಇಲ್ಲೊಂದು ಆಡಿನ ಮರಿ ಹುಟ್ಟಿದ 3 ದಿನಕ್ಕೆ ಹಾಲು ನೀಡುತ್ತಿದೆ.ಹೌದು. ಬಾಗಲಕೋಟೆ ತಾಲೂಕಿನ ತುಳಸೀಗೆರೆಯ ಹನುಮಂತ ದಾಸನ್ನವರ ಅವರ ಮನೆಯಲ್ಲಿ ವಾರದ ಹಿಂದೆ ಆಡೊಂದು ಮರಿಗೆ ಜನ್ಮ ನೀಡಿತ್ತು. ಆದರೆ ಹಾಲು ಕುಡಿಯುವ  ಈ ಎಳೆ ಆಡಿನ ಮರಿ ಕೇವಲ 3 ದಿನಗಳಲ್ಲೇ ಹಾಲು ನೀಡಲಾರಂಭಿಸಿದೆ. ಇದು ಗ್ರಾಮದ ಜನರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಅಲ್ಲದೇ ಹಾರ್ಮೋನುಗಳ ವ್ಯತ್ಯಾಸದ ಕಾರಣ ಹೀಗಾಗಿರಬಹುದು ಎಂದು ವೈದ್ಯಾಧಿಕಾರಿಗಳು, ಅಭಿಪ್ರಾಯ ಪಟ್ಟಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos