3.49 ಲಕ್ಷ ಮೌಲ್ಯದ ವಸ್ತು ಕಳ್ಳತನ

3.49 ಲಕ್ಷ ಮೌಲ್ಯದ ವಸ್ತು ಕಳ್ಳತನ

ಹುಬ್ಬಳ್ಳಿ, ಜ. 13: ಹಳೇ ಹುಬ್ಬಳ್ಳಿಯ ಅಂಬಣ್ಣವರ ಬಡಾವಣೆಯ ರಾಜೇಸಾಬ ಬಡಗಿ ಅವರ ಮನೆಯ ಬಾಗಿಲು ಮುರಿದ ಕಳ್ಳರು ಮನೆಯಲ್ಲಿದ್ದ ಬಂಗಾರದ ಆಭರಣ, ‌ನಗದು ಸೇರಿ 3.49 ಲಕ್ಷ ಮೌಲ್ಯದ ವಸ್ತು ದೋಚಿಕೊಂಡು ಹೋಗಿದ್ದಾರೆ. ರಾಜೇಸಾಬ ಮನೆಯ ಬೀಗ ಹಾಕಿಕೊಂಡು ಸಂಬಂಧಿಕರ ಮನೆಗೆ ಹೋದಾಗ ಈ ಕಳ್ಳತನ ನಡೆದಿದೆ.

ಅಲ್ಮೇರಾದಲ್ಲಿ 55 ಗ್ರಾಂ ಚಿನ್ನಾ, 550 ಬೆಳ್ಳಿಯ  ಆಭರಣಗಳು, 1.70 ಲಕ್ಷ ನಗದು, ಗ್ಯಾಸ್ ಸಿಲಿಂಡರ್ ಹಾಗೂ ಮನೆಯ ಹೊರಗಡೆ ಇದ್ದ ಬೈಕ್ ಸಹ ಕಳ್ಳತನ ಮಾಡಲಾಗಿದೆ ಎಂದು ಮನೆ ಮಾಲಿಕರು ತಿಳಿಸಿದ್ದಾರೆ.

ಈ ಕುರಿತು ಹಳ್ಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos