3.02 ಎಕರೆ ಅಡಕೆ ತೋಟ ನಾಶ…

3.02 ಎಕರೆ ಅಡಕೆ ತೋಟ ನಾಶ…

ಬೆಂಗಳೂರು: ಸುಮಾರು 600 ಅಡಿಕೆ ಮರಗಳ ಬುಡಕ್ಕೆ ವಿಷ ಹಾಕಿ ನಾಶ ಪಡಿಸುವ ಕೆಲಸ ದಾವಣಗೆರೆಯ ಹಿರೇಕೋಗಲೂರು ಸಮೀಪದ ದೊಡ್ಡ ಘಟ್ಟ ಗ್ರಾಮದಲ್ಲಿ ನಡೆದಿದೆ. ಬಸವಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. 2 ಸಾವಿರ ಅಡಿಕೆ ಮರಗಳ ಪೈಕಿ 600 ಅಡಿಕೆ ಗಿಡಗಳು ನಾಶವಾಗಿದೆ.

ಹಿರೇಕೋಗಲೂರು ಸಮೀಪದ ದೊಡ್ಡಘಟ್ಟ ಗ್ರಾಮದಲ್ಲಿನ 3.02 ಎಕರೆ ಅಡಿಕೆ ತೋಟದಲ್ಲಿ ಯಾರೋ ಕಿಡಿಗೇಡಿಗಳು ಅಡಿಕೆ ಗಿಡದ ಬುಡಗಳನ್ನು ಕೊಡಲಿಯಿಂದ ಕತ್ತರಿಸಿ, ರೌಂಡ್ ಅಪ್ ಔಷಧಿ ಹಾಕಿ ಫಸಲು ನೀಡುತ್ತಿದ್ದ 600 ಅಡಕೆ ಮರಗಳನ್ನು ನಾಶಮಾಡಿರುವ ಘಟನೆ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ. ತೋಟದಲ್ಲಿ ನೀರಿಲ್ಲದನ್ನು ಕಂಡು ಬಶೀರ್ ಅಡಕೆ ತೋಟಕ್ಕೆ ನೀರು ಹಾಯಿಸಲು ಹೋದಾಗ, ಜಮ್ಮತ್ನವರು ನೀರು ಹಾಯಿಸಬೇಡ ಎಂದು ವಾಪಾಸ್ ಕಳಿಸಿದ್ದಾರೆ.

ಜಮ್ಮಾತಿನ ಸದಸ್ಯರೆಲ್ಲರೂ ತೋಟಕ್ಕೆ ಹೋಗಿ ನೋಡಿದಾಗ 600 ಅಡಕೆ ಮರಗಳ ಬುಡಕ್ಕೆ ಕೊಡ್ಲಿಯಿಂದ ಕತ್ತರಿಸಿ ರೌಂಡ್ ಅಫ್ ಔಷಧಿ ಹಾಕಿರುವುದು ಬೆಳಕಿಗೆ ಬಂದಿದೆ. ಇದರಿಂದ ಸುಮಾರು 5 ರಿಂದ 6 ಲಕ್ಷ ನಷ್ಟವಾಗಿದೆ. ಜಮಾಯತ್ ಕಾರ್ಯದರ್ಶಿ ಹುಮಾಯಿನ್ ಬಸವಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos