ಸಾರ್ವಜನಿಕರಿಗೆ 29ಕೋಟಿ ರೂ. ಅನುದಾನ

ಸಾರ್ವಜನಿಕರಿಗೆ 29ಕೋಟಿ ರೂ. ಅನುದಾನ

ಮಾಲೂರು: ತಾಲೂಕಿನಲ್ಲಿ ಹಿಂದಿನ ವರ್ಷ ಸರ್ಕಾರದಿಂದ ಸಾರ್ವಜನಿಕರ ಉಪಯೋಗಕ್ಕೆ ಇಲಾಖೆಗಳಿಗೆ ಬಂದಿದ ೨೯ ಕೋಟಿ ರೂಪಾಯಿ ಅನುದಾನ ಬಂದಿದ್ದು, ಇಲಾಖೆ ಅಧಿಕಾರಿಗಳು ಹಣವನ್ನು ನಿಗದಿತ ಸಮಯದಲ್ಲಿ ಖರ್ಚು ಮಾಡದ ಕಾರಣ ಹಣ ವಾಪಸ್ಸು ಹೋದರೆ ಅದಕ್ಕೆ ಆಧಿಕಾರಿಗಳೇ ಹೊಣೆ ಹೊರಬೇಕೆಂದು ಜಿ.ಪಂ. ಸಿ.ಇ.ಒ ರವಿಕುಮಾರ್ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಶಾಸಕ ಕೆ.ವೈ.ನಂಜೇಗೌಡ ಅವರ ಅಧ್ಯಕ್ಷತೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಕೆ.ಡಿ.ಪಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ತಾಲೂಕಿನಲ್ಲಿ ಇರುವ ೩೬೦ ಹಳ್ಳಿಗಳ ಪೈಕಿ ೧೨ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಗ್ರಾಮದ ಸಮೀಪದಲ್ಲಿರುವ ಗ್ರಾಮದಿಂದ ಪೈಪ್ ಲೈನ್ ಮೂಲಕ ನೀರು ಸರಬರಾಜು ಮಾಡುವಂತೆ ಅದಕ್ಕೆ ಬೇಕಾದ ಹಣ ಕೋಡುತ್ತೇವೆ. ಮುಂಬರುವ ಬೇಸಿಗೆ ಅಷ್ಟರಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ಹೊಸ ಕೊಳವೆ ಬಾವಿ ಕೊರೆಯಿಸಲು ಅಥವಾ ರೀ ಡ್ರೀಲ್ ಮಾಡಲು ಅವಕಾಶ ಇದೆ. ಬೇಕಾದ ಹಣ ಕೊಡಲು ನಾವು ಸಿದ್ಧವಾಗಿದ್ದೀವಿ. ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದರೆ ಪೋಲೀಸರ ಸಹಕಾರದಿಂದ ಯಾವುದೇ ಮುಲಾಜಿಲ್ಲದೆ ಜೆಸಿಬಿ ಮೂಲಕ ತೆರುವು ಮಾಡಿ. ಒತ್ತುವರಿದಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲು ಮಾಡಬೇಕು ಇಲ್ಲದಿದ್ದರೆ ಅಧಿಕಾರಿ ಮೇಲಿನ ಕೇಸು ದಾಖಲಾಗುತ್ತೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos