26ರಿಂದ 30ರ ವರೆಗೆ ಮುರುಘಾಮಠದ ಜಾತ್ರೆ

26ರಿಂದ 30ರ ವರೆಗೆ ಮುರುಘಾಮಠದ ಜಾತ್ರೆ

ಧಾರವಾಡ, ಜ. 21: ಅಥಣಿ ಮಥಧನಿ ಮುರುಘೇಂದ್ರ ಮಹಾಸ್ವಾಮಿಗಳು ಜಾತ್ರಾ ಮಹೋತ್ಸವ ಇದೇ ಜ. 26ರಿಂದ 30ರ ವರೆಗೆ ನಡೆಯಲಿದೆ ಎಂದು ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ತಿಳಿಸಿದ್ದಾರೆ.

ನಗರದ ಮುರುಘಾಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುರುಘಾಮಠವು 300ವರ್ಷದ ಇತಿಹಾಸ ಹೊಂದಿದೆ. ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ದೊಡ್ಡ ಪ್ರಮಾಣದಲ್ಲಿ ಇತಿಹಾಸ ಹೊಂದಿದೆ. ಮೃತ್ಯುಂಜಯ ಮಹಾಸ್ವಾಮಿಗಳು ಆರಂಭಿಸಿದ್ದ ಪ್ರಸಾದ್ ನಿಲಯ ಆಗಿನ ಕಾಲದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ವಿದ್ಯೆ ಅಣ್ಣ ನೀಡಿದೆ ಎಂದು ಹೇಳಿದರು.

12ನೇ ಶತಮಾನದ ಬಸವಾದಿ ಶರಣರ ವಚನಗಳನ್ನು ಗ್ರಂಥ ರೂಪದಲ್ಲಿ ಮುರುಘಾಮಠದ ಶರಣರು ಬಿಡುಗಡೆ ಮಾಡಿದ್ದಾರೆ. ಧಾರ್ಮಿಕ ಸಂದೇಶ ಮುಟ್ಟಿಸುವ ನಿಟ್ಟಿನಲ್ಲಿ ಪಾಕ್ಷಿಕ ಪತ್ರಿಕೆಯನ್ನು ಹೋರಡಿಸಿದ್ದಾರೆ ಈಗಲೂ ಪತ್ರಿಕೆ ಜೀವಂತವಾಗಿ ಇದೆ. ಅಥಣಿ ಮುರುಘೇಂದ್ರ ಸ್ವಾಮಿಗಳು ದೇವರ ಸ್ವರೂಪ ವಾಗಿದ್ದಾರೆ ಅದಕ್ಕೆ ಇದಿಗ ನೂರು ವರ್ಷಗಳ ಇತಿಹಾಸ ಎಂದು ತಿಳಿಸಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ಸಂಗೀತ, ನೃತ್ಯ, ವಿದ್ವಾಂಸರ ಬಗ್ಗೆ ಗೌರವ ಇಟ್ಟುಕೊಂಡು ಎಲ್ಲ ಲೋಕದಲ್ಲಿ ಸೇವೆ ಸಲ್ಲಿಸಿದ ಕಲಾವಿದರಿಗೆ ಸನ್ಮಾನ  ಕಾರ್ಯ ಮಾಡಿದ್ದಾರೆ. ಜಾತ್ರಾ ಮಹೋತ್ಸವಕ್ಕೆ ವಿಶೇಷ ಕಾರ್ಯಕ್ರಮ ಮಾಡುವ  ಶಿಷ್ಯ ವೃಂದ ಕಾಪಾಡಿದೆ. ಈ ಭಾರಿಯ ಮಹಾಂತ ಪ್ರಶಸ್ತಿಯನ್ನು ವಿಜಯ್ ಸಂಕೇಶ್ವರ ಅವರಿಗೆ ನೀಡಲಾಗುವುದು ಎಂದು ಘೋಷಿಸಿದರು.

ಜಾತ್ರಾ ಮಹೋತ್ಸವಕ್ಕೆ ಈ ಭಾರಿ ಸಚಿವ ಸಿ.ಸಿ. ಪಾಟೀಲ್, ಶಾಸಕ ನಿಂಬಣ್ಣನವರ, ಭಾಗವಹಿಸುತ್ತಾರೆ. ವಿವಿಧ ರಾಜಕೀಯ ಗಣ್ಯರು ಸಹ ಜಾತ್ರಾ ಮಹೋತ್ಸವಕ್ಕೆ ಆಗಮಿಸಲಿದ್ದಾರೆ. ಇನ್ನೂ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಪುಸ್ತಕ ಬಿಡುಗಡೆ ಮಾಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ. ಲಕಮನಹಳ್ಳಿ, ವಿ ಎಸ್ ಕಟಗಿ, ಎಸ್.ಎಸ್ ಲಕ್ಷ್ಮೇಶ್ವರ, ಎಂ ವಿ ವಡ್ಡೀನ, ರವಿಂದ್ರ ವಸ್ತ್ರದ, ಸಿ. ಎಸ್ ಪಾಟೀಲ, ವಿ.ಎಸ. ಕಟ್ಟಿ, ಬಸವರಾಜ ಕಡಕಲ್ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos