ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಲ್ಲಿ ತಂತ್ರಜ್ಞಾನ ಶೃಂಗಸಭೆ-2023 ಇಂದಿನಿಂದ ಆರಂಭವಾಗಿದೆ. 30ಕ್ಕೂ ಹೆಚ್ಚು ರಾಷ್ಟ್ರಗಳ ತಂತ್ರಜ್ಞರು, ಸಂಶೋಧಕರು, ನವೋದ್ಯಮಗಳ ಪ್ರತಿನಿಧಿಗಳು ಈ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ತಂತ್ರಜ್ಞಾನ ಶೃಂಗಸಭೆಯ 26ನೇ ಆವೃತ್ತಿ. ಬೆಂಗಳೂರು ನಗರದ ಅರಮನೆ ಆವರಣದಲ್ಲಿ ಈ ಬಾರಿಯ ಶೃಂಗಸಭೆ ನಡೆಯುತ್ತಿದೆ. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಮಾತುಕತೆಗಳಿಗೂ ಸಭೆ ವೇದಿಕೆಯಾಗಲಿದೆ.
ಶೃಂಗಸಭೆಯಲ್ಲಿ ನಾವೀನ್ಯತೆ ಮತ್ತು ವೈಮಾನಿಕ ಉದ್ಯಮ ಖಾತೆ ಸಚಿವ ಬಾಗೋತ್ ಮುಸ್ಲಿನ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಎಎಂಡಿ ಸಮೂಹದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮಾರ್ಕ್ ಪೇಪರ್‌ಮಾಸ್ಟರ್, ವಿಪ್ರೊ ಕಾರ್ಯನಿರ್ವಾಹಕ ನಿರ್ದೇಶಕ ರಿಷಾದ್ ಪ್ರೇಮ್‌ಜಿ ಸೇರಿದಂತೆ ಹಲವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ರು.