25 ಗೆಟಪ್ನಲ್ಲಿ ನಟ ವಿಕ್ರಮ್

25 ಗೆಟಪ್ನಲ್ಲಿ ನಟ ವಿಕ್ರಮ್

ಹೈದರಾಬಾದ್, ಆ.5 : ಇದೀಗ ಕಾಲಿವುಡ್ ನಟ ಬರೋಬ್ಬರಿ 25 ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಿನಿಮಾಗಳಲ್ಲಿ ದ್ವಿಪಾತ್ರ- ತ್ರಿಪಾತ್ರ ಸೇರಿದಂತೆ ಅನೇಕ ಪಾತ್ರಗಳಿಗೆ ಒಬ್ಬರೇ ಬಣ್ಣ ಹಚ್ಚಿಕೊಂಡು ಅಭಿನಯಿಸುತ್ತಿದ್ದರು. ನಟ ಕಮಲ್ ಹಾಸನ್ ಅವರು `ದಶಾವತಾರಂ’ ಸಿನಿಮಾದಲ್ಲಿ ಬರೋಬ್ಬರಿ 10 ಗೆಟಪ್ಗಳಲ್ಲಿ ಕಾಣಿಸಿಕೊಂಡಿದ್ದರು. ಕಾಲಿವುಡ್ ನಟ ವಿಕ್ರಮ್ ಅವರು 25 ಗೆಟಪ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಹೊಸದೊಂದು ದಾಖಲೆ ಬರೆಯುವುದಕ್ಕೆ ಮುಂದಾಗಿದ್ದಾರೆ. ಇನ್ನೂ ಹೆಸರಿಡದ ಸಿನಿಮಾವೊಂದರಲ್ಲಿ ಅವರು 25 ಅವತಾರಗಳಲ್ಲಿ ಪ್ರೇಕ್ಷಕರ ಎದುರು ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
`ಇಮೈಕಾ ನೋಡಿಗಲ್’ ಖ್ಯಾತಿಯ ಅಜಯ್ ಜ್ಞಾನಮುತ್ತು ನಿರ್ದೇಶನ ಮಾಡಲಿರುವ ಈ ಸಿನಿಮಾದಲ್ಲಿ ವಿಕ್ರಮ್ ಇಂಥದ್ದೊಂದು ಸಾಹಸ ಮಾಡಲಿದ್ದಾರೆ. ವಿಕ್ರಮ್ ಅವರಿಗೆ ಸಿನಿಮಾದಲ್ಲಿ ಅಮೆರಿಕ ಮೂಲದ ಸಂಸ್ಥೆಯೊಂದು ಮೇಕಪ್ ಮಾಡಲಿದೆ. ಇವರಿಗೆ ಜೋಡಿಯಾಗಿ ಪ್ರಿಯಾ ಭವಾನಿಶಂಕರ್ ಅಭಿನಯಿಸಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos