224 ಕೋಟಿ ಜಿ.ಎಸ್. ಟಿ. ತೆರಿಗೆ ವಂಚನೆ ಪತ್ತೆ

224 ಕೋಟಿ ಜಿ.ಎಸ್. ಟಿ. ತೆರಿಗೆ ವಂಚನೆ ಪತ್ತೆ

ಹೈದರಾಬಾದ್, ಮಾ. 13, ನ್ಯೂಸ್ ಎಕ್ಸ್ ಪ್ರೆಸ್: ಕಬ್ಬಿಣ ಮತ್ತು ಉಕ್ಕು ಉತ್ಪನ್ನಗಳ ವಹಿವಾಟಿನಲ್ಲಿ ತೊಡಗಿಕೊಂಡಿರುವ 8 ಕಾಸಗಿ ಕಂಪೆನಿಗಳ ಸಮೂಹವೊಂದು  ಬರೋಬ್ಬರಿ 224 ಕೋಟಿ ರೂ.ಗಳ ತೆರಿಗೆ ವಂಚನೆ ಮಾಡಿರುವುದನ್ನು ಕೇಂದ್ರ ಜಿ.ಎಸ್. ಟಿ. ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

1,289 ಕೋಟಿ ರೂ. ಮೌಲ್ಯದ ನಕಲಿ ಇನ್ವಾಯ್ಸ್ ಗಳನ್ನು ವಶಡಿಸಿಕೊಂಡಿದ್ದಾರೆ.

ಈ ಜಿ.ಎಸ್.ಟಿ.ವಂಚನೆ ಜಾಲದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು ಆತನದಿಂದ 19.75 ಕೋಟಿ ರೂ.ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಹೈದರಾಬಾದ್ ಸೆಂಟ್ರಲ್ ಜಿ.ಎಸ್.ಟಿ. ಕಮಿಷನರೇಟ್ ಈ ಬೃಹತ್ ಮೊತ್ತದ ಜಿ.ಎಸ್.ಟಿ. ತೆರಿಗೆ ವಂಚನೆಯನ್ನು ತನ್ನ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

ಈ ವಂಚಕ ಕಂಪೆನಿಗಳ ಉನ್ನತರ ನಿವಾಸ ಮತ್ತು ಕಾರ್ಯಾಲಯಗಳ ಮೇಲೆ ವ್ಯಾಪಕ ದಾಳಿ ನಡೆಸಲಾಗಿದದ್ದು ಅನೇಕ ನಕಲಿ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2017ರ ಜುಲೈ ತಿಂಗಳಿಂದ ಈ ಭಾರೀ ವಂಚನೆ ಜಾಲ ಕಾರ್ಯವೆಸಗುತ್ತಿತ್ತು ಎಂದವರು ಹೇಳಿದ್ದಾರೆ.

ಈ ಕಂಪೆನಿಗಳ ಆವರ್ತನೆಯ ಫೇಕ್ ವಹಿವಾಟು ದಾಖಲೆಪತ್ರಗಳನ್ನು ತೋರಿಸಿ ತಮ್ಮ ವಹಿವಾಟನ್ನು ದೊಡ್ಡ ಮೊತ್ತದಲ್ಲಿ ತೋರಿಸುತ್ತಿದ್ದವು ಎಂದು ಜಿ.ಎಸ್.ಟಿ. ಅಧಿಕಾರಿಗಳು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos