2019ರ ಮಹಿಳಾ ಐಪಿಎಲ್ ತಂಡದ ಪಟ್ಟಿ ಪ್ರಕಟ!

2019ರ ಮಹಿಳಾ ಐಪಿಎಲ್ ತಂಡದ ಪಟ್ಟಿ ಪ್ರಕಟ!

ನವದೆಹಲಿ, ಏ. 24, ನ್ಯೂಸ್ ಎಕ್ಸ್ ಪ್ರೆಸ್: ಐಪಿಎಲ್ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿ. ಐಪಿಎಲ್ ಟೂರ್ನಿ ನಡುವೆ ಬಿಸಿಸಿಐ ಆಯೋಜಿಸುತ್ತಿರುವ ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯಕ್ಕೆ ವಿಶ್ವದಲ್ಲೇ ಮನ್ನಣೆ ಸಿಕ್ಕಿದೆ.

ಮಹಿಳೆಯರ ಕ್ರಿಕೆಟ್ ಅಭಿವೃದ್ದಿಗಾಗಿ ಬಿಸಿಸಿಐ ಆಯೋಜಿಸುತ್ತಿರುವ ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯಕ್ಕೆ ನಾಯಕಿಯರ ಪಟ್ಟಿ ಪ್ರಕಟಿಸಲಾಗಿದೆ.

ಐಪಿಎಲ್ ಪ್ಲೇ-ಆಫ್ ವೇಳೆ ನಡೆಯಲಿರುವ ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯಗಳಲ್ಲಿ ಮಿಥಾಲಿ ರಾಜ್, ಹರ್ಮನ್ ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧನಾ ತಂಡಗಳನ್ನು ಮುನ್ನಡೆಸಲಿದ್ದಾರೆ. 3 ತಂಡಗಳು ಸ್ಪರ್ಧೆಗಿಳಿಯಲಿದ್ದು, ಫೈನಲ್ ಸೇರಿ 4 ಪಂದ್ಯಗಳು ನಡೆಯಲಿವೆ.

ಮೇ 11ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ‘ಭಾರತದ ಹಾಲಿ ಹಾಗೂ ಭವಿಷ್ಯದ ತಾರಾ ಆಟಗಾರ್ತಿಯರು ಇರಲಿದ್ದಾರೆ. ಜತೆಗೆ ವಿದೇಶಿ ತಾರೆಯರನ್ನು ಆಹ್ವಾನಿಸಲಾಗಿದೆ. ಮಹಿಳಾ ಕ್ರಿಕೆಟ್ ಅಭಿವೃದ್ಧಿಯತ್ತ ಇದು ಮತ್ತೊಂದು ಹೆಜ್ಜೆ’ ಎಂದು ಬಿಸಿಸಿಐ ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos