2018ರಲ್ಲಿ ಆಟಗಾರರು- 2019ರಲ್ಲಿ ಕೋಚ್

2018ರಲ್ಲಿ ಆಟಗಾರರು- 2019ರಲ್ಲಿ ಕೋಚ್

ಪುಣೆ, . 8, ನ್ಯೂಸ್ ಎಕ್ಸ್ ಪ್ರೆಸ್:  ಕಳೆದ 2018ರ ಪ್ರೊ ಕಬಡ್ಡಿ ಆವೃತ್ತಿಯಲ್ಲಿ ಆಟಗಾರರಾಗಿ ಕಾಣಿಸಿಕೊಂಡ ಕಬಡ್ಡಿ ಪಟುಗಳು ಇದೀಗ ಕೋಚ್ಗಳಾಗಿ ಕಣಕ್ಕಿಳಿಯುತ್ತಿದ್ದಾರೆ. 7ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಭಾರತದ ಮಾಜಿ ನಾಯಕರಾದ ಅನೂಪ್ ಕುಮಾರ್ ಹಾಗೂ ರಾಕೇಶ್ ಕುಮಾರ್ ಕೋಚ್ಗಳಾಗಿ ಕಾಣಿಸಿಕೊಳ್ಳಲಿದ್ದಾರೆ.

ಅನೂಪ್ ಪುಣೇರಿ ಪಲ್ಟನ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದರೆ, ರಾಕೇಶ್ ಹರ್ಯಾಣ ಸ್ಟೀಲರ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅನೂಪ್ ಕಳೆದ ಆವೃತ್ತಿ ವೇಳೆ ಕಬಡ್ಡಿಗೆ ವಿದಾಯ ಘೋಷಿಸಿದ್ದರು. ರಾಕೇಶ್ ಕಳೆದ ಆವೃತ್ತಿಯಲ್ಲಿ ಪ್ರಸಾರ ಹಕ್ಕು ಹೊಂದಿರುವ ವಾಹಿನಿಯಲ್ಲಿ ವಿಶ್ಲೇಷಕರಾಗಿ ಕೆಲಸ ಮಾಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos