200 ದಂಡ ನೀಡಿದ ಸಚಿವ

200 ದಂಡ ನೀಡಿದ ಸಚಿವ

ರಾಜಸ್ತಾನ , ಸೆ. 6 : ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನಕ್ಕೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ 2,978 ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ವಾಹನ ಸವಾರರಿಂದ ಬರೋಬರಿ ಸುಮಾರು 30 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.

ಹೊಸ ಮೋಟಾರು ವಾಹನ ಕಾಯ್ದೆ ಬ್ರೇಕ್ ಮಾಡಿದವರಿಗೆ ಭಾರಿ ದಂಡ ವಿಧಿಸಲಾಗಿತ್ತಿದೆ. ದೇಶದಾದ್ಯಂತ ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಿದ್ದರೂ, ರಾಜಸ್ತಾನದ ಸಚಿವರೊಬ್ಬರು ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿ ನಿಯಮ ಬ್ರೇಕ್ ಮಾಡಿ ದಂಡ ನೀಡಿದ್ದಾರೆ.
ಆದರೆ ರಾಜಸ್ತಾನದ ಸಚಿವ ಪ್ರಮೋದ್ ಜೈನ್ ಹೆಲ್ಮೆಟ್ ಧರಿಸದೆ ತಮ್ಮ ಪತ್ನಿ ಜೊತೆ ಬೈಕ್ ಸವಾರಿ ಮಾಡಿದ್ದರು. ರಾಜಸ್ತಾನ ಸರ್ಕಾರ ಇನ್ನೂ ಹೊಸ ನಿಯಮ ಜಾರಿಗೆ ತಂದ ಬಗ್ಗೆ ಘೋಷಣೆ ಮಾಡಿಲ್ಲ. ಹಾಗಾಗಿ ಹಳೆ ನಿಯಮದಂತೆ ಸಚಿವರಿಗೆ 200 ರೂ. ದಂಡ ವಿಧಿಸಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos