ಶೀಘ್ರದಲ್ಲಿ ಹೊಸ 20 ರೂ. ನೋಟು ಹೊರ ತರಲಿರುವ ಆರ್‌ಬಿಐ!

ಶೀಘ್ರದಲ್ಲಿ ಹೊಸ 20 ರೂ. ನೋಟು ಹೊರ ತರಲಿರುವ ಆರ್‌ಬಿಐ!

ನವದೆಹಲಿ, ಏ. 27, ನ್ಯೂಸ್ ಎಕ್ಸ್ ಪ್ರೆಸ್: ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 20 ರೂ. ಮುಖಬೆಲೆಯ ಹೊಸ ನೋಟಿನ ಮಾದರಿಯನ್ನು ಪರಿಚಯಿಸಿದೆ. ಮಹಾತ್ಮ ಗಾಂಧೀಜಿ ಭಾವಚಿತ್ರವನ್ನು ನೋಟ್ ಹೊಂದಿದ್ದು, ಹೊಸ ಸಿರೀಸ್ ಜೊತೆಗೆ ಗರ್ವನರ್ ಶಕ್ತಿಕಾಂತ್ ದಾಸ್ ಅವರ ಸಹಿಯನ್ನು ಹೊಂದಿರಲಿದೆ. 20 ರೂ. ಮುಖಬೆಲೆಯ ಹೊಸ ನೋಟು ಹಸಿರು ಮತ್ತು ಹಳದಿ ಮಿಶ್ರಣದ ಬಣ್ಣವನ್ನು ಹೊಂದಿರಲಿದೆ. ನೋಟು ಹಿಂಭಾಗದಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಎಲ್ಲೋರ ಗುಹಾಲಯ ಚಿತ್ರ ಹೊಂದಿರಲಿದೆ. ಹೊಸ ನೋಟುಗಳ ಜೊತೆಗೆ ಹಳೆಯ ನೋಟುಗಳು ಚಾಲ್ತಿಯಲ್ಲಿರಲಿವೆ. ಹೊಸ ನೋಟು 63 ಮಿ.ಮಿ*129 ಮಿಮಿ ಅಳತೆ ಹೊಂದಿದೆ.

ನೋಟಿನ ಮುಂಭಾಗ ಹೀಗಿರಲಿದೆ:
1. 20 ರೂ. ಎಂದು ಆಂಗ್ಲ ಭಾಷೆಯ ನಂಬರ್ ಇರಲಿದೆ.
2. ದೇವನಾಗರಿ ಲಿಪಿಯಲ್ಲಿ 20 ರೂ. ಬರೆಯಲಾಗಿದೆ.
3. ನೋಟಿನ ಮಧ್ಯದಲ್ಲಿ ಮಹಾತ್ಮ ಗಾಂಧೀಜಿ ಭಾವಚಿತ್ರ ಇರಲಿದೆ.
4. ಮೈಕ್ರೋ ಲಿಪಿಯಲ್ಲಿ RBI’, ‘भारत’, ‘INDIA’ ಮತ್ತು ’20’ ಇರಲಿದೆ.
5. ಸುರಕ್ಷಾ ದಾರದಲ್ಲಿ ‘भारत’ ಮತ್ತು RBI
6. ಗ್ಯಾರಂಟಿ ಕ್ಲೌಸ್ ಮತ್ತು ಗರ್ವನರ್ ಶಕ್ತಿಕಾಂತ್ ದಾಸ್ ಅವರ ಹಸ್ತಾಕ್ಷರ
7. ನೋಟಿನ ಎಡಭಾಗದಲ್ಲಿ ಅಶೋಕ ಸ್ತಂಭದ ಚಿತ್ರ

ನೋಟಿನ ಹಿಂಭಾಗ ಹೀಗಿರಲಿದೆ:
1. ಎಡಭಾಗದಲ್ಲಿ ನೋಟು ಮುದ್ರಣಗೊಂಡ ವರ್ಷ ಮೇಲುಗಡೆ ಆಂಗ್ಲ ಅಂಕಿಯಲ್ಲಿ 20 ರೂ.
2. ಎಡಭಾಗದ ಕೆಳಗಡೆ ಸ್ವಚ್ಛ ಭಾರತ್ ಘೋಷಣೆ ಮತ್ತು ಚಿಹ್ನೆ
3. ಮಧ್ಯಭಾಗದಲ್ಲಿ ಭಾಷೆಗಳ ಪಟ್ಟಿ
4. ಭಾಷೆಗಳ ಪಟ್ಟಿಯ ಬಲಭಾದಲ್ಲಿ ಎಲ್ಲೋರ ಗುಹಾಲಯ ಚಿತ್ರ
5. ನೋಟಿನ ಬಲಭಾಗದ ಮೇಲುಗಡೆ ದೇವನಾಗರಿ ಲಿಪಿಯಲ್ಲಿ 20 ರೂ. ಮತ್ತು ಕೆಳಭಾಗದಲ್ಲಿ ಆಂಗ್ಲ ಅಂಕಿ 20 ರೂ. ಎಂದು ಇರಲಿದೆ. 2016ರಲ್ಲಿ 500 ಮತ್ತು 1 ಸಾವಿರ ಮುಖಬೆಲೆಯ ನೋಟುಗಳ ಅಮಾನ್ಯೀಕರಣದ ಬಳಿಕ ಹೊಸ 500, 2 ಸಾವಿರ, 200, 100, 50 ರೂ. ಗಳನ್ನು ಪರಿಚಯಿಸಲಾಗಿತ್ತು. ಇದೀಗ 20 ರೂ. ನೋಟುಗಳ ಮಾದರಿಯನ್ನು ಆರ್ ಬಿಐ ಬಿಡುಗಡೆಗೊಳಿಸಿದ್ದು, ಶೀಘ್ರದಲ್ಲಿಯೇ ಚಲಾವಣೆಗೆ ಬರಲಿದೆ.

ಫ್ರೆಶ್ ನ್ಯೂಸ್

Latest Posts

Featured Videos