2 ಬಾರಿಯೂ ದಂಡ ಕಟ್ಟದ ಸಿ.ಎಂ. ಕುಮಾರಸ್ವಾಮಿ..!!

2 ಬಾರಿಯೂ ದಂಡ ಕಟ್ಟದ ಸಿ.ಎಂ. ಕುಮಾರಸ್ವಾಮಿ..!!

ಬೆಂಗಳೂರು, ಮಾ.19, ನ್ಯೂಸ್ ಎಕ್ಸ್ ಪ್ರೆಸ್ : ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಾಮಾನ್ಯವಾಗಿ ಸರ್ಕಾರದ ವತಿಯಿಂದ ಬರುವ ಕಾರನ್ನು ಬಳಸುವುದಿಲ್ಲ ಬದಲಿಗೆ ಅವರ ಬಳಿ ಇರುವ ಖಾಸಗಿ ವಾಹನವಾದ ರೇಂಜ್ ರೋವರ್ ಕಾರ್ ಅನ್ನು ಬಳಸುತ್ತಾರೆ, ಕಳೆದ ಫೆಬ್ರವರಿ ತಿಂಗಳಿನಲ್ಲಿ ಈ ಕಾರು ಎರಡು ಬಾರಿ ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದ್ದು, ಕ್ಯಾಮರಾ ಕಣ್ಣುಗಳಿಗೆ ಸರಿಯಾಗಿದೆ, ಇದರ ಆಧಾರವಾಗಿ ಕಸ್ತೂರಿ ಮೀಡಿಯಾ ಕಂಪನಿಗೆ ನೋಟಿಸ್ ಕಳುಹಿಸಿದೆ. ಒಮ್ಮೆ ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಫೆಬ್ರವರಿ ಹತ್ತರಂದು ಕಾರು ಚಾಲಕ ಮೊಬೈಲ್ ನಲ್ಲಿ ಮಾತಾಡುತ್ತಾ ವಾಹನ ಚಲಾಯಿಸಿದ್ದು ಒಂದು ಅಪರಾಧವಾದರೆ, ಫೆಬ್ರವರಿ 22ರಂದು ಬಸವೇಶ್ವರ ವೃತ್ತದಲ್ಲಿ ಅತಿ ವೇಗವಾಗಿ ಕಾರನ್ನು ಚಾಲನೆ ಮಾಡಿದ್ದರಿಂದ ಎರಡನೇ ಅಪರಾಧ ಸಂಭವಿಸಿದೆ, ಅಪರಾಧಕ್ಕೆ 300 ರೂಪಾಯಿಯಂತೆ 2 ಅಪರಾಧಕ್ಕೆ 600 ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಹಾಗೂ ಅಪರಾಧದ ನೋಟಿಸನ್ನು ಮನೆ ವಿಳಾಸಕ್ಕೆ ಕಳುಹಿಸಲಾಗಿದ್ದು ಪಾವತಿ ಮಾಡಬೇಕಾಗಿದೆ ದಂಡವನ್ನು ಇಲ್ಲಿಯವರೆಗೂ ಪಾವತಿ ಮಾಡಿಲ್ಲವೆಂದು ವರಿಷ್ಠ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಹಾಗೂ ಒಂದು ವೇಳೆ ತಂಡವನ್ನು ಕಟ್ಟದೆ ಇದ್ದಲ್ಲಿ ಎಲ್ಲರ ಕಣ್ಣಿಗೆ ಕಾಣಿಸುವ ರೀತಿಯಲ್ಲಿ ಕಾರನ್ನು ಅಡ್ಡಗಟ್ಟಿ ದಂಡ ಸಂಗ್ರಹ ಮಾಡಲಾಗುವುದು ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos