2 ತಲೆ ಇರುವ ಕರು ಜನನ.!

2 ತಲೆ ಇರುವ ಕರು ಜನನ.!

ಚೇಳೂರು, ಏ. 22 ನ್ಯೂಸ್ ಎಕ್ಸ್ ಪ್ರೆಸ್: ಜಗತ್ತಿನಲ್ಲ ಪ್ರತಿ ದಿನ  ಪ್ರತಿ ಕ್ಷಣ ಒಂದಲ್ಲ ಒಂದು  ರೀತಿಯ ವಿಸ್ಮಯದ ಸಂಗತಿಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ತಕ್ಕಂತೆ ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ತೋಳಚನಹಳ್ಳಿ ಗ್ರಾಮದ ನಿಂಗಪ್ಪ ಎಂಬುವರಿಗೆ ಸೇರಿದ ಸೀಮೆ ಹಸು 2 ತಲೆಯ ಕರುವಿಗೆ ಜನ್ಮ ನೀಡಿದೆ.

ಕರುವಿಗೆ 2 ಬಾಯಿ ಹಾಗೂ 4 ಕಣ್ಣುಗಳಿವೆ. ಈ ಕರು ಆರೋಗ್ಯ ವಾಗಿದೆ. ಇದರಿಂದ ಗಾಬರಿಗೊಂಡ ಹಸುವಿನ ಮಾಲೀಕ ಈ ವಿಷಯವಾಗಿ ಜ್ಯೋತಿಷ್ಯ ಕೇಳಿದಾಗ ಇದು ದೈವ ಸ್ವರೂಪ.

ಈ ಕರುವನ್ನು ಯಾವುದೇ ಕಾರಣಕ್ಕೂ ಮಾರುವುದು ಬೇಡ. ಮನೆಯಲ್ಲೇ ಚೆನ್ನಾಗಿ ಸಾಕಿ ಒಳ್ಳೆಯದಾಗುತ್ತದೆ ಎಂದು ಶಾಸ್ತ್ರಿಗಳು ಹೇಳಿದ್ದಾರೆ

 

ಫ್ರೆಶ್ ನ್ಯೂಸ್

Latest Posts

Featured Videos