ದ್ವಿತೀಯ ಸುತ್ತಿಗೆ ಪ್ರಣೀತ್, ಪ್ರಣಯ್

ದ್ವಿತೀಯ ಸುತ್ತಿಗೆ ಪ್ರಣೀತ್, ಪ್ರಣಯ್

ನವದೆಹಲಿ, ಆ.20 : ಬಾಸೆಲ್ನಲ್ಲಿ ಆರಂಭಗೊಂಡ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸಾಯಿ ಪ್ರಣೀತ್ ಮತ್ತು ಎಚ್.ಎಸ್. ಪ್ರಣಯ್ ದ್ವಿತೀಯ ಸುತ್ತು ತಲುಪಿದ್ದಾರೆ.
ಪ್ರಣೀತ್ ಕೆನಡಾದ ಜಾಸನ್ ಹೊ ಶು ಅವರನ್ನು 21-17, 21-18ರಿಂದ ಮಣಿಸಿದರೆ, ಪ್ರಣಯ್ ಫಿನ್ಲಂಡಿನ ಈಟು ಹೀನೊ ಅವರನ್ನು 17-21, 21-10, 21-11 ಅಂತರದಿಂದ ಹಿಮ್ಮೆಟ್ಟಿಸಿದರು.
ವನಿತಾ ಡಬಲ್ಸ್ನಲ್ಲಿ ಮೇಘನಾ ಎಂ.-ಎಸ್. ಪೂರ್ವಿಶಾ ರಾಮ್ ಕೂಡ ಗೆಲುವಿನ ಆರಂಭ ಪಡೆದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos