ಎರಡೆರಡು ಖುಷಿಯಲ್ಲಿ ಬಸಣ್ಣಿ..!

ಎರಡೆರಡು ಖುಷಿಯಲ್ಲಿ ಬಸಣ್ಣಿ..!

ಬೆಂಗಳೂರು, ಡಿ. 25: ‘ಯಜಮಾನ’ನ ಬಸಣ್ಣಿಯಾಗಿ ಮೈ ಬಳುಕಿಸಿ ಪಡ್ಡೆ ಹುಡುಗರ ಹೃದಯಕ್ಕೆ ಕನ್ನ ಹಾಕಿದ್ದ ನಟಿ ತಾನ್ಯಾ ಹೋಪ್ ‘ಅಮರ್’ ಚಿತ್ರದ ಬಳಿಕ ಎಲ್ಲಿ ಹೋದರು? ಎಂಬ ಪ್ರಶ್ನೆಯೊಂದು ಸಿನಿಪ್ರಿಯರಲ್ಲಿದೆ. ಇದಕ್ಕೆ ಸಿಗುವ ಉತ್ತರ ಕಾಲಿವುಡ್ ಮತ್ತು ಟಾಲಿವುಡ್. ಹೌದು, ಗೆ ಈಗ ಪರಭಾಷೆ ಚಿತ್ರಗಳಲ್ಲಿ ಬ್ಯಾಕ್ ಟು ಬ್ಯಾಕ್  ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತ ಕನ್ನಡದಲ್ಲೂ 2 ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಉಪೇಂದ್ರ ಜತೆಗಿನ ಹೋಮ್ ಮಿನಿಸ್ಟರ್ ಚಿತ್ರದಲ್ಲಿ ತಾನ್ಯಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

ಹಾಗೆಯೇ ಚಿರಂಜೀವಿ ಸರ್ಜಾ ನಟಿಸಲಿರುವ ಖಾಕಿ ಸಿನಿಮಾದಲ್ಲೂ ತಾನ್ಯಾ ನಾಯಕಿಯಾಗಿ ಮೈ ಬಳುಕಿಸಿದ್ದಾರೆ. ಅತ್ತ ಇತರೆ ಚಿತ್ರರಂಗ ಕೂಡ ಯಜಮಾನನ ಬಸಣ್ಣಿಯನ್ನು ಬಾ…ಎಂದು ಕೈ ಬೀಸಿ ಕರೆಯುತ್ತಿದ್ದು, ಈಗಾಗಲೇ ತಾನ್ಯಾ ಅಭಿನಯದ ತಮಿಳಿನ ತಡಂ  ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಇನ್ನು ಅಮರ್ ಚಿತ್ರದ  ಮೂಲಕ ತಾನ್ಯಾ ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಎಲ್ಲಾ ಚಿತ್ರರಂಗದಿಂದಲೂ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ತಾನ್ಯಾ ಈಗ ಡಬಲ್ ಖುಷಿಯಲ್ಲಿದ್ದಾರೆ. ಹೌದು ತಾನ್ಯಾ ಅಭಿನಯದ 2 ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಅದು ಕೂಡ 2 ಚಿತ್ರರಂಗದಲ್ಲಿ ಎಂಬುದು ವಿಶೇಷ. ಕನ್ನಡದಲ್ಲಿ ಚಿರು ಸರ್ಜಾ ಜೊತೆ ತಾನ್ಯಾ ಕಾಣಿಸಿಕೊಂಡಿರುವ  ‘ಖಾಕಿ ‘ಚಿತ್ರವು ಹೊಸ ವರ್ಷ ಜನವರಿ 24 ರಂದು ತೆರೆಗೆ ಬರಲಿದೆ. ಅದೇ ದಿನ ಟಾಲಿವುಡ್ನಲ್ಲಿ ‘ಡಿಸ್ಕೊ ರಾಜ’ ನ ಜತೆ ಹೆಜ್ಜೆ ಹಾಕಲು ಅಮರ್ ಬೆಡಗಿ ಸಜ್ಜಾಗುತ್ತಿದ್ದಾರೆ.

ಈ ಎರಡೂ ಸಿನಿಮಾ ಜ. 24ರಂದು ತೆರೆಗೆ ಬರಲಿದ್ದು, ಹೊಸ ವರ್ಷ ಆರಂಭದಲ್ಲಿಯೇ ಡಬಲ್  ಹಿಟ್ ನಿರೀಕ್ಷೆಯಲ್ಲಿದ್ದಾರೆ ತಾನ್ಯಾ. ನವೀನ್ ರೆಡ್ಡಿ ನಿರ್ದೇಶನದ ‘ಖಾಕಿ’ ಚಿತ್ರದ  ಟೀಸರ್ ಈಗಾಗಲೇ ಹಲವು ಕಾರಣಗಳಿಂದ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡಿದೆ. ಹಾಗೆಯೇ ತೆಲುಗಿನಲ್ಲಿ ರವಿ ತೇಜ ಅಭಿನಯದ ಡಿಸ್ಕೊ ರಾಜ ಕೂಡ ಭರ್ಜರಿಯಾಗಿಯೇ ಸೌಂಡ್ ಮಾಡುತ್ತಿದೆ. ಹೀಗಾಗಿ ಈ ಎರಡು ಚಿತ್ರಗಳು  ತಮ್ಮ ಕೆರಿಯರ್ನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ವಿಶ್ವಾಸದಲ್ಲಿದ್ದಾರೆ ಸ್ಯಾಂಡಲ್ವುಡ್ ನಟಿ. ಒಟ್ಟಿನಲ್ಲಿ ‘ಯಜಮಾನ’ನ ಬಸಣ್ಣಿಯಾಗಿ ಚಂದನವನಕ್ಕೆ ಕಾಲಿಟ್ಟ ಬೆಂಗಳೂರು ಬೆಡಗಿ ಪರಭಾಷೆಯಲ್ಲೂ ಮಿಂಚುತ್ತಿರುವುದು ಖುಷಿಯ ವಿಚಾರ.

ಫ್ರೆಶ್ ನ್ಯೂಸ್

Latest Posts

Featured Videos