ದಾಖಲೆ ಇಲ್ಲದ 2 ಲಕ್ಷದ 34 ಸಾವಿರ ರೂ. ವಶ!

ದಾಖಲೆ ಇಲ್ಲದ 2 ಲಕ್ಷದ 34 ಸಾವಿರ ರೂ. ವಶ!

ಚಾಮರಾಜನಗರ, ಏ. 5, ನ್ಯೂಸ್ ಎಕ್ಸ್ ಪ್ರೆಸ್: ದಾಖಲೆಯಿಲ್ಲದ 2 ಲಕ್ಷದ 34 ಸಾವಿರ ರೂ. ಹಣವನ್ನು ಪ್ರತ್ಯೇಕ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಲೋಕಸಭೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ದಾಖಲೆ ಇಲ್ಲದ 2 ಲಕ್ಷದ 34 ಸಾವಿರ ರೂ. ಹಣವನ್ನು ಪ್ರತ್ಯೇಕ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಘಟನೆ ನಡೆದಿದೆ. ಗುಂಡ್ಲುಪೇಟೆಯಿಂದ ಚಾಮರಾಜನಗರಕ್ಕೆ ಹೋಗುವ ರಸ್ತೆಯ ಶಿವಾನಂದ ಸರ್ಕಲ್ ಬಳಿ ತಪಾಸಣೆ ವೇಳೆ ಕಾರಿನಲ್ಲಿ ತೆರಳುತ್ತಿದ್ದ ಅಬಾಜ್ ಎಂಬುವರಿಂದ ದಾಖಲೆ ಇಲ್ಲದ 80 ಸಾವಿರ ರೂ. ಹಣ ಪತ್ತೆಯಾಗಿದ್ದು, ಪ್ಲೈಯಿಂಗ್ ಸ್ವ್ಕಾಡ್ ಅಧಿಕಾರಿ ವಶಪಡಿಸಿಕೊಂಡಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯ ಚಾಮರಾಜನಗರ ರಸ್ತೆಯಲ್ಲಿ ತಪಾಸಣೆ ವೇಳೆ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಸೈಯದ್ ಯೂನಿಸ್ ಎಂಬುವರಿಂದ ದಾಖಲೆ ಇಲ್ಲದ 83,500 ರೂ. ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಾಣಹಳ್ಳಿ ಹತ್ತಿರ ಕಾರಿನಲ್ಲಿ ಬಂದ ನಾರಾಯಣ ಸ್ವಾಮಿ ಎಂಬುವರಿಂದ ದಾಖಲೆ ಇಲ್ಲದ 70, 500 ರೂ.ಗಳನ್ನು ಎಸ್.ಎಸ್.ಟಿ (ಸ್ಟ್ಯಾಟಿಕ್ ಸರ್ವೇಲೆನ್ಸ್ ಟೀಮ್) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos