ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಕ್ತಾಯ

ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಕ್ತಾಯ

ನವದೆಹಲಿ, ಮಾ, 26, ನ್ಯೂಸ್ ಎಕ್ಸ್ ಪ್ರೆಸ್: ನಡೆಯಲಿರುವ ಲೋಕಸಭಾ ಚುನಾವಣೆಯ ಕುರಿತು ಏ.11ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಮಾ.25ಕ್ಕೆ ಮುಕ್ತಾಯವಾಗಿದ್ದು, ಲೋಕಸಭೆ ಪ್ರವೇಶ ಬಯಸಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ಇಂದು ನಡೆಯಲಿದೆ.

ಚುನಾವಣೆಯಿಂದ ಹಿಂದೆ ಸರಿಯಬೇಕೆಂಬ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಮಾ. 28ರ ಒಳಗಾಗಿ ವಾಪಸ್ ಪಡೆಯಬಹುದಾಗಿದೆ.

ಆಂಧ್ರಪ್ರದೇಶದ 25, ಅರುಣಾಚಲ ಪ್ರದೇಶದ 2, ಅಸ್ಸಾಂನ 5, ಬಿಹಾರದ 4, ಛತ್ತೀಸ್ಗಢದ 1, ಜಮ್ಮು-ಕಾಶ್ಮೀರದ 2, ಮಹಾರಾಷ್ಟ್ರದ 7, ಮಣಿಪುರದ 1, ಮೇಘಾಲಯದ 2, ಮಿಜೋರಾಂನ 1, ನಾಗಾಲ್ಯಾಂಡ್ನ 1, ಒಡಿಶಾದ 4, ಸಿಕ್ಕಿಂನ 1, ತೆಲಂಗಾಣದ 17, ತ್ರಿಪುರಾದ 1, ಉತ್ತರ ಪ್ರದೇಶದ 8, ಉತ್ತರಾಖಂಡ್ನ 5, ಪಶ್ಚಿಮ ಬಂಗಾಳದ 2, ಅಂಡಮಾನ್ ನಿಕೋಬಾರ್ನ 1, ಲಕ್ಷದ್ವೀಪದ 1 ಕ್ಷೇತ್ರ ಸೇರಿದಂತೆ ಒಟ್ಟಾರೆ 91 ಲೋಕಸಭಾ ಕ್ಷೇತ್ರಗಳಲ್ಲಿ ಏ.11ರಂದು ನಡೆಯಲಿದೆ.

ಫ್ರೆಶ್ ನ್ಯೂಸ್

Latest Posts

Featured Videos