19 ಸದಸ್ಯರುಗಳ ಗೈರು!

19 ಸದಸ್ಯರುಗಳ ಗೈರು!

ಹೊಸಕೋಟೆ, ಸೆ. 13 : ಹೊಸಕೋಟೆ ತಾಲ್ಲೂಕು ಕಸಬಾ ಹೋಬಳಿಯ ಕುಂಬಳಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಇಂದು 2019-20ನೇ ಸಾಲಿನ ಗ್ರಾಮ ಸಭೆಯನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಮೀನುಗಾರಿಕೆ ಇಲಾಕೆಯ ನೋಡಲ್ ಅಧಿಕಾರಿ ಸುಭ್ರಮಣಿ ಉದ್ಘಾಟಿಸಿದರು. ಗ್ರಾಮಸಭೆಗೆ ಅಧ್ಯಕ್ಷರು ಸೆರಿದಂತೆ ಒಟ್ಟು 4 ಸದಸ್ಯರು ಮಾತ್ರ ಹಾಜರಿದ್ದರೆ. ಮಹಿಳಾ ಸಂಘದವರು ಹೆಚ್ಚಾಗಿರುವು ಕಂಡು ಬಂದರೆ ಪುರುಷ ನಾಗರೀಕರು ಒಂದು ತೆಲೆಯೂ ಕಾಣಲಿಲ್ಲಿ ಕಾರ್ಯಕ್ರಮವನ್ನು ನೋಡಲ್ ಅಧಿಕಾರಿ ಸುಬ್ರಮಣಿ ಹೇಳಿದರು.

ಇಂದು ಒಂದು ವರ್ಷಕ್ಕೆ ಒಂದು ಭಾರಿ ತಾಲ್ಲೂಕಿನ ಎಲ್ಲಾ ಇಲಾಖೆಗಳ ಸಮ್ಮೂಖದಲ್ಲಿ ನಡೆಯುವ ಗ್ರಾಮಸಭೆಗೆ ಎಲ್ಲಾ ಚುನಾಹಿತ ಜನಪ್ರತಿನಿದಿಗಳು ಮತ್ತು ಗ್ರಾಮಸ್ಥರುಗಳು ಹಾಜರಿರಬೇಕು. ತಮ್ಮ ಗ್ರಾಮಗಳಿಗೆ ಆಗಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುಬೇಕು. ಗ್ರಾಮದ ನೃರ್ಮಲ್ಯ ಚರಂಡಿ, ಬೀದಿ ದೀಪ, ನೀರು, ರಸ್ತೆ, ಇನ್ನೀತರ ಮೂಲಭೂತ ಸೌಕರ್ಯಗಳನ್ನು ಈ ಗ್ರಾಮ ಸಭೆಯಲ್ಲಿ ಅನುಮೋದಿಸಿ ನಂತರ ಅದು ಹಣ ಬಿಡುಗಡೆಯಾಗುವುದು ಅದರಿಂದ ನೀಮ್ಮ ಗ್ರಾಮಗಳಲ್ಲಿ ಕೆಲಸಗಳು ನಡೆಯುತ್ತವೆ.

ಗ್ರಾಮ ಸಭೆಗೂ ಮೂರು ದಿನಗಳ ಮುನ್ನ ಪಂಚಾಯ್ತಿ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿ ವಾರ್ಡ್ ಗಳ ಸಭೆಗಳನ್ನ ಮಾಡುತ್ತಾರೆ. ಸಾರ್ವಜನಿಕರಿಗೆ ಅರಿವನ್ನು ಮೂಡಿಸುವ ಉದ್ದೇಶ ಮತ್ತು ತಮಗೆ ಬೇಕಾಗುವಂತ ಗ್ರಾಮಗಳ ಅಭಿವೃದಿಗೆ ಪೂರಕವಾದ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿಕೊಳ್ಳುಲು ತಯಾರಿಯ ಸಭೆಗಳಾಗಿರುತ್ತವೆ ಎಂದು ಸುಣ್ರಮಣಿ ಹೇಳಿದರೆ

ರೇಷೆ ಸಾಗಾಣಿಕೆಯಿಂದ ರೈತರು ಸಾಕಷ್ಟು ಸಹಾಯಧನವನ್ನು ಪಡೆದುಕೊಂಡು ಉಧ್ಯಮ ಶೀಲಾರಾಗಬಹುದು ಹಾಗೂ ಒಂದು ರೇಷೆ ಹುಳು 26 ದಿನ ಆಹಾರ ಸೇವನೇ ಮಾಡಿ ಗೂಡಿ ಕಟ್ಟಿ 26 ದಿನ ಆಹಾರವಿಲ್ಲದೆ ರೇಷೆ ನೇಯಲು ಮತ್ತು ಅದರಿಂದ ಸಾವಿರಾರು ಜನರಿಗೆ ಕೆಲಸ ಕೊಟ್ಟಿದೆ. ಅದಕ್ಕಾಗಿ ರೇಷೆ ಹುಳು ಸಾಕಾಣಿಕೆಗೆ ನಮ್ಮ ಇಲಾಖೆ ವತಿಯಿಂದ ಎಸ್.ಸಿ.ಎಸ್‌ಟಿಗಳಿಗೆ ಶೇಕಡಾ 90%  ಸಹಾಯಧನ ಮತ್ತು ಸಾಮಾನ್ಯರಿಗೆ 50% ನೀಡಲಾಗುವುದು ಇದನ್ನು ರೇಷೆ ಬೇಳೆಯುವ ರೈತರು ಅಳವಡಿಸಿಕೊಳ್ಳಬೇಕು ಎಂದು ಕಸಬಾ ಹೋಬಳಿಯ ರೇಷೆ ವಿಸ್ತರಣಾಧಿಕಾರಿ ಮರುಸಿದ್ದಪ್ಪ ಹೇಳಿದರು.

ತೋಟಗಾರಿಕೆ ಇಲಾಖೆಯ ಅಧಿಕಾರಿ ಮುನಿಸ್ವಾಮಿ ಮಾತನಾಡಿ, ಕುಂಬಳಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಗುಲಾಬಿ ಹೂಗಳನ್ನು ಶೇಕಡಾ 90% ಇದ್ದರೆ ಸಾಮಾನ್ಯವಾಗಿ ಎಲ್ಲಾ ರೈತರು ಡ್ರಿಪ್ ಅಳವಡಿಕೊಂಡಿದ್ದಾರೆ. ನಮ್ಮಲ್ಲು ಸಹ ಡ್ರಿಪ್ ಅಳವಡಿಸಿಕೊಳ್ಳಲು ಸಹಾಯಧನವನ್ನು ನೀಡಲಾಗುವುದು  ವಯಸ್ಕ ಯುವಕರು ಔಷಧಿಗ ಳನ್ನು ಸಿಂಪಡಿಸುವ್ಯದರಿಂದ ಅವರ ದೇಹದ ಮಲೇ ಕೆಟ್ಟ ಪರಿಣಾಮ ಬೀರಲಿದೆ ಅದ್ದರಿಂದ ದಯಮಾಡಿ ಚಿಕ್ಕವಯಸಿನವರು ಔಷಧಿಗಳನ್ನು ಸಿಂಪಡಿಸುವುದು ಬೇಡ ಎಂದರು.

ಆರೋಗ್ಯದ ಬಗ್ಗೆ ಪ್ರತಿ ಗ್ರಾಮದಲ್ಲೂ  ಅರಿವನ್ನು ಮುಡಿಸಬೇಕು ಅದು ನೀಮ್ಮ ಕೆಲಸ ಇತ್ತೀಚೆಗೆ ಡೆಂಗ್ಯೂ, ಜ್ವರಗಳಲು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.

ಎನ್.ಆರ್.ಎಲ್.ಎಂ ಕೋಡಿನೇಟರ್ ನಾಗರಾಜ್ ಮಾತನಾಡಿ, ಮಹಿಳೆಯರು ಇಂದು ಗ್ರಾಮ ಸಭೆಗೆ ಹೆಚ್ಚಾಗಿ ಬಂದಿರು ಉದ್ದೇಶ 10 ಲಕ್ಷ ಮಹಿಳಾ ಸಂಘಗಳಿಗೆ ಚೆಕ್ ಬಂದಿರುವ ಕಾರಣ ಇದು ಆಗಬಾರದು. ಯಾವುದೇ ಗ್ರಾಮ ಪಂಚಾಯ್ತಿಗಳ ಸಭೆಗೆ ಮಹಿಳೆಯರು ಹೆಚ್ಚಾಗಿ ಪಾಲ್ಗೋಳ್ಳಬೇಕು. ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಮೀನಾ ಶ್ರೀನಿವಾಸ್ ವಹಿಸಿದ್ದರು. ಸ್ವಾಗತವನ್ನು ಪಿಡಿಓ ಆಯಿಷಾ ನಡೆಸಿದರೆ ವಂದನಾರ್ಪಣೆಯನ್ನು ಕಾರ್ಯದರ್ಶಿ ದಾಸಪ್ಪ ಮಾಡಿದರು. ಸಭೆಯಲ್ಲಿ ಸದಸ್ಯರಾದ ಬಿ.ರಾಜಣ್ಣ, ಶ್ರೀನಿವಾಸ್, ನಾರಾಯಣಸ್ವಾಮಿ, ಶಿಕ್ಷಣ ಇಕಾಖೆಯ ವೇಣು, ಗ್ರಾಮ ಪಂಚಾಯ್ತಿ ಬಿಲ್ ಕಲೇಕ್ಟರ್ ಕುಮಾರ್, ಹಾಜರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos