19 ವರ್ಷಗಳ ಬಳಿಕ ಭೀಕರ ಉಗ್ರರ ದಾಳಿ

19 ವರ್ಷಗಳ ಬಳಿಕ ಭೀಕರ ಉಗ್ರರ ದಾಳಿ

ದೇಶದ ಇತಿಹಾಸದಲ್ಲಿಯೇ 19 ವರ್ಷಗಳ ಬಳಿಕ ನಿನ್ನೆ ಮಧ್ಯಾಹ್ನ ಜಮ್ಮು
ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭೀಕರ ಉಗ್ರರ ದಾಳಿ ನಡೆದಿದೆ. ಈ ದಾಳಿಯಲ್ಲಿ ಈಗಾಗಲೇ 40ಕ್ಕೂ ಹೆಚ್ಚು
ಯೋಧರು ಹುತಾತ್ಮರಾಗಿದ್ದು, ಸಾವಿನ ಸಂಖ್ಯೆ ಏರುತ್ತಲೆ ಇದೆ. ಅಲ್ಲದೇ 50ಕ್ಕೂ ಹೆಚ್ಚು ಜನ ಯೋಧರು
ತೀವ್ರ ಗಾಯಗೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ನಿನ್ನೆ ಮಧ್ಯಾಹ್ನ ಪುಲ್ವಾಮದ ಅವಂತಿಪುರ್‌ನಲ್ಲಿ ಉಗ್ರರು ಸೇನಾ ವಾಹನದ ಮೇಲೆ
ಆತ್ಮಾಹುತಿ ದಾಳಿ ನಡೆಸಿದ್ದಾರೆ. ಜೈಷ್‌-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಆದಿಲ್ ಅಹ್ಮದ್ ದಾರ್
ಸೇನಾ ವಾಹನಕ್ಕೆ ಸ್ಫೋಟಕಗಳನ್ನು ತುಂಬಿಸಿದ್ದ ಕಾರನಿಂದ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಬಾಂಬ್​​
ಸ್ಪೋಟಗೊಂಡಿದ್ದು, ಸ್ಥಳದಲ್ಲಿದ್ದ ಸಿಆರ್​​ಪಿಎಫ್​​ ಯೋಧರು ಸಾವನ್ನಪ್ಪಿದ್ದಾರೆ.

ಉಗ್ರರ ದಾಳಿಗೆ ಸಾಕ್ಷಿಯಾದ ಪುಲ್ವಾಮಾ ಜಿಲ್ಲೆಯು ಕಣಿವೆ
ರಾಜ್ಯ ಶ್ರೀನಗರದಿಂದ 20 ಕಿ.ಮೀ. ದೂರದಲ್ಲಿದೆ. ಆದರೂ, ಸ್ಫೋಟದ ಸದ್ದು ಶ್ರೀನಗರ-ಪುಲ್ವಾಮಾ
ಅಂಚಿನಲ್ಲಿರುವ ಜನಸಾಮಾನ್ಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಸ್ಫೋಟದ ಸದ್ದು ಸುಮಾರು 10-12 ಕಿ.ಮೀ.ವರೆಗೂ ವ್ಯಾಪಿಸಿದೆ. ಶಬ್ದ ಕೇಳಿದ ಜನರು ಅಲ್ಲಿಂದ ಕಾಲ್ಕಿತ್ತಿದ್ದು, ಸುರಕ್ಷಿತವಾದ ಸ್ಥಳಗಳನ್ನು ತಲುಪಿದ್ದಾರೆ.ಸ್ಫೋಟ ಸ್ಥಳದಿಂದ ಕೇವಲ 300 ಮೀಟರ್ ದೂರದಲ್ಲಿದ್ದ ಲೆತ್​ಪೋರಾ ಮಾರುಕಟ್ಟೆ ಪ್ರದೇಶದಲ್ಲಿದ್ದ ಜನರು ಘಟನೆಯಿಂದ ಬೆಚ್ಚಿಬಿದ್ದಿದ್ದು, ಶಬ್ದ ಕೇಳಿ ಅಂಗಡಿಗಳ ಶೆಟರ್​ ಎಳೆದು ಕಾಲ್ಕಿತ್ತಿದ್ದಾರೆ. 
ಜಮ್ಮುಕಾಶ್ಮೀರ ಹೆದ್ದಾರಿಯಲ್ಲಿ ನಡೆಯುತ್ತಿರುವ ದಾಳಿಗಳಿಂದಾಗಿ ಜನರು ರೋಸಿಹೋಗಿದ್ದು, ಆತಂಕದ ವಾತಾವರಣದಲ್ಲೇ ಬದುಕು ನಡೆಸುತ್ತಿದ್ದಾರೆ.

ದೇಶದ ಇತಿಹಾಸದಲ್ಲಿಯೇ 19 ವರ್ಷಗಳ ಬಳಿಕ ನಿನ್ನೆ(ಗುರುವಾರ) ಮಧ್ಯಾಹ್ನ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭೀಕರ ಉಗ್ರರ ದಾಳಿ ನಡೆದಿದೆ. ಈ ದಾಳಿಯಲ್ಲಿ ಈಗಾಗಲೇ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದು, ಸಾವಿನ ಸಂಖ್ಯೆ ಏರುತ್ತಲೆ ಇದೆ. ಅಲ್ಲದೇ 50ಕ್ಕೂ ಹೆಚ್ಚು ಜನ ಯೋಧರು ತೀವ್ರ ಗಾಯಗೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ಗುರುವಾರ(ಫೆ.14) ಮಧ್ಯಾಹ್ನ ಪುಲ್ವಾಮದ ಅವಂತಿಪುರ್‌ನಲ್ಲಿ ಉಗ್ರರು ಸೇನಾ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದಾರೆ. ಜೈಷ್‌-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಆದಿಲ್ ಅಹ್ಮದ್ ದಾರ್ ಸೇನಾ ವಾಹನಕ್ಕೆ ಸ್ಫೋಟಕಗಳನ್ನು ತುಂಬಿಸಿದ್ದ ಕಾರನಿಂದ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಬಾಂಬ್​​ ಸ್ಪೋಟಗೊಂಡಿದ್ದು, ಸ್ಥಳದಲ್ಲಿದ್ದ ಸಿಆರ್​​ಪಿಎಫ್​​ ಯೋಧರು ಸಾವನ್ನಪ್ಪಿದ್ದಾರೆ.

ಉಗ್ರರ ದಾಳಿಗೆ ಸಾಕ್ಷಿಯಾದ ಪುಲ್ವಾಮಾ ಜಿಲ್ಲೆಯು ಕಣಿವೆ
ರಾಜ್ಯ ಶ್ರೀನಗರದಿಂದ 20 ಕಿ.ಮೀ. ದೂರದಲ್ಲಿದೆ. ಆದರೂ, ಸ್ಫೋಟದ ಸದ್ದು ಶ್ರೀನಗರ-ಪುಲ್ವಾಮಾ
ಅಂಚಿನಲ್ಲಿರುವ ಜನಸಾಮಾನ್ಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಸ್ಫೋಟದ ಸದ್ದು ಸುಮಾರು 10-12 ಕಿ.ಮೀ.ವರೆಗೂ ವ್ಯಾಪಿಸಿದೆ. ಶಬ್ದ ಕೇಳಿದ ಜನರು ಅಲ್ಲಿಂದ ಕಾಲ್ಕಿತ್ತಿದ್ದು, ಸುರಕ್ಷಿತವಾದ ಸ್ಥಳಗಳನ್ನು ತಲುಪಿದ್ದಾರೆ. ಸ್ಫೋಟ ಸ್ಥಳದಿಂದ ಕೇವಲ 300 ಮೀಟರ್ ದೂರದಲ್ಲಿದ್ದ ಲೆತ್​ಪೋರಾ ಮಾರುಕಟ್ಟೆ ಪ್ರದೇಶದಲ್ಲಿದ್ದ ಜನರು ಘಟನೆಯಿಂದ ಬೆಚ್ಚಿಬಿದ್ದಿದ್ದು, ಶಬ್ದ ಕೇಳಿ ಅಂಗಡಿಗಳ ಶೆಟರ್​ ಎಳೆದು ಕಾಲ್ಕಿತ್ತಿದ್ದಾರೆ. 
ಜಮ್ಮುಕಾಶ್ಮೀರ ಹೆದ್ದಾರಿಯಲ್ಲಿ ನಡೆಯುತ್ತಿರುವ ದಾಳಿಗಳಿಂದಾಗಿ ಜನರು ರೋಸಿಹೋಗಿದ್ದು, ಆತಂಕದ ವಾತಾವರಣದಲ್ಲೇ ಬದುಕು ನಡೆಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos