17 ಲಕ್ಷ ರೂ. ಮೌಲ್ಯದ 500 ಗ್ರಾ.ಚಿನ್ನ ಜಪ್ತಿ

17 ಲಕ್ಷ ರೂ. ಮೌಲ್ಯದ 500 ಗ್ರಾ.ಚಿನ್ನ ಜಪ್ತಿ

ಹೈದರಬಾದ, ಜೂನ್. 13: ಗುದದ್ವಾರದಲ್ಲಿ 17 ಲಕ್ಷ ರೂ. ಮೌಲ್ಯದ 500 ಗ್ರಾಮ್‌ ಚಿನ್ನವನ್ನು ಅಡಗಿಸಿಟ್ಟು ಕಳ್ಳ ಸಾಗಣೆ ಮಾಡಲು ಯತ್ನಿಸಿದ ವಿಮಾನ ಪ್ರಯಾಣಿಕನನ್ನು ಕಸ್ಟಮ್ಸ್‌ ಅಧಿಕಾರಿಗಳು ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ದುಬೈಯಿಂದ ಬಂದಿದ್ದ ಪ್ರಯಾಣಿಕನ ತಪಾಸಣೆ ಮಾಡಿದಾಗ ಆತ ತನ್ನ ಗುದದ್ವಾರದಲ್ಲಿ 720 ಗ್ರಾಂ ಗೋಲ್ಡ್‌ ಪೇಸ್ಟ್‌ ಅವಿತಿಟ್ಟುಕೊಂಡದ್ದು ಪತ್ತೆಯಿತು. ಈ ಗೋಲ್ಡ್‌ ಪೇಸ್ಟನ್ನು ಕರಗಿಸಿದಾಗ 24 ಕ್ಯಾರೆಟ್‌ 538.090 ಗ್ರಾಂ ಚಿನ್ನ ದೊರಕಿತು. ಇದರ ಮಾರುಕಟ್ಟೆ ಮೌಲ್ಯ 17,56,863 ರೂ. ಎಂದು ಅಧಿಕಾರಿಗಳು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos