ಗಾಂಧಿಜೀಯ 150ನೇ ಜಯಂತಿ, ಶಾಸ್ತ್ರೀಜಿಯ 115ನೇ ಜನ್ಮದಿನ

ಗಾಂಧಿಜೀಯ 150ನೇ ಜಯಂತಿ, ಶಾಸ್ತ್ರೀಜಿಯ 115ನೇ ಜನ್ಮದಿನ

ನವದೆಹಲಿ, ಅ. 2: ಇಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ. ಅಹಿಂಸೆಯ ಪ್ರತಿಪಾದಕ ಮಹಾತ್ಮಾ ಗಾಂಧಿಜೀಯ 150ನೇ ವರ್ಷದ ಮತ್ತು ಮಾಜಿ ಪ್ರಧಾನಿ ಶಾಸ್ತ್ರಿಯವರ 115ನೇ ಜನ್ಮದಿನವನ್ನು ಇಂದು ಎಲ್ಲೆಡೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಘಾಟ್ಗೆ ಭೇಟಿ ಕೊಡಲಿದ್ದಾರೆ.

150ನೇ ಗಾಂಧಿ ಜಯಂತಿಯಂದು ಗಾಂಧಿ ಯಾತ್ರೆಗೆ ಚಾಲನೆ

ಪ್ರಧಾನಿ ನರೇಂದ್ರ ಮೋದಿ, ರಾಜ್ಘಾಟ್ನಲ್ಲಿರೋ ಮಹಾತ್ಮ ಗಾಂಧಿ ಸ್ಮಾರಕಕ್ಕೆ ತೆರಳಿ ರಾಷ್ಟ್ರಪಿತನಿಗೆ ನಮನ ಸಲ್ಲಿಸಲಿದ್ದಾರೆ. ಬಳಿಕ ವಿಜಯಘಾಟ್ನಲ್ಲಿರುವ ಶಾಸ್ತ್ರಿಯವರ ಸ್ಮಾರಕಕ್ಕೆ ತೆರಳಿ ನಮನ ಸಲ್ಲಿಸಲಿದ್ದಾರೆ. ನಂತರ ಸಂಸತ್ತಿನಲ್ಲಿ ಇಬ್ಬರೂ ನಾಯಕರಿಗೆ ನಮನವನ್ನು ಸಲ್ಲಿಸಲಿದ್ದಾರೆ. ಸಂಜೆ ವೇಳೆಗೆ ಗುಜರಾತ್ನ ಅಹಮದಾಬಾದ್ನಲ್ಲಿರುವ ಸಬರಮತಿ ಆಶ್ರಮಕ್ಕೆ ಪ್ರಧಾನಿ ಭೇಟಿ ನೀಡಲಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos