15 ದಿನದ ಶೂಟಿಂಗ್’ಗೆ 2 ಕೋಟಿ ಈ ನಟಿಗೆ.!?

15 ದಿನದ ಶೂಟಿಂಗ್’ಗೆ 2 ಕೋಟಿ ಈ ನಟಿಗೆ.!?

ಬೆಂಗಳೂರು, ಮೇ. 11, ನ್ಯೂಸ್ ಎಕ್ಸ್ ಪ್ರೆಸ್: ಸಿನಿಮಾ ಇಂಡಸ್ಟ್ರಿಯಲ್ಲಿ ಸಾಮಾನ್ಯವಾಗಿ ಹೀರೋಗಳಿಗೆ ಹೆಚ್ಚು ಸಂಭಾವನೆ ಸಿಗುತ್ತದೆ. ಇಲ್ಲಿ ನಟಿ ಒಬ್ಬರು ಕೇವಲ 15 ದಿನದ ಶೂಟಿಂಗ್ ಗಾಗಿ ಪಡೆದ ಸಂಭಾವನೆ ಕೇಳುದರೆ ಶಾಕ್ ಆಗುತ್ತೆ.

ಹೌದು, ನಟಿ ಕೇವಲ 15 ದಿನದ ಶೂಟಿಂಗ್ ಗಾಗಿ ಸುಮಾರು 2 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬುದು ಸಿನಿ ದುನಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.  ಸದ್ಯ ಮಹೇಶ್ ಬಾಬು ಅಭಿನಯದ ಮಹರ್ಷಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಪೂಜಾ ಹೆಗ್ಡೆ ತಮ್ಮ ಮುಂದಿನ ಚಿತ್ರದಲ್ಲಿ ಸುಮಾರು 2 ಕೋಟಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರಂತೆ. ‘ಗಬ್ಬರ್ ಸಿಂಗ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಹರೀಶ್ ಶಂಕರ್ ವಾಲ್ಮಿಕಿ ಎಂಬ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾಗೆ ಪೂಜೆ ಹೆಗ್ಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. ನಾಯಕಿ ಪಾತ್ರವನ್ನ ಕೇವಲ 15 ದಿನದಲ್ಲಿ ಶೂಟಿಂಗ್ ಮಾಡಿ ಮುಗಿಸುವ ಪ್ಲಾನ್ ನಿರ್ದೇಶಕರಾದ್ದಾಗಿದೆ. ಅದಕ್ಕಾಗಿ 2 ಕೋಟಿ ನೀಡಲಾಗುತ್ತಿದೆಯಂತೆ ಎಂಬ ಸುದ್ದಿ ಕೇಳುತ್ತಿದ್ದಂತೆ ನಿರ್ದೇಶಕ ಹರೀಶ್ ಶಂಕರ್ ಅಲ್ಲೆಗಳೆದಿದ್ದಾರೆ. ಪೂಜಾ ಹೆಗ್ಡೆ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು. ಅದರಲ್ಲಿ ಸತ್ಯವಿಲ್ಲ ಎಂದು ಟ್ವೀಟ್ ಮಾಡಿ ಗಾಸಿಪ್ ಗೆ ಅಂತ್ಯವಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos