14 ಜನರನ್ನ ಗುಂಡಿಕ್ಕಿ ಕೊಂದ ಉಗ್ರರು

14 ಜನರನ್ನ ಗುಂಡಿಕ್ಕಿ ಕೊಂದ ಉಗ್ರರು

ಕರಾಚಿ, ಏ. 19, ನ್ಯೂಸ್ ಎಕ್ಸ್ ಪ್ರೆಸ್: ಪಾಕಿಸ್ಥಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬಸ್ಸುಗಳ ಮೇಲೆ ದಾಳಿ ನಡೆಸಿದ ಭಯೋತ್ಪಾದಕರು, ನೌಕಾ ಪಡೆಯ ಸಿಬಂದಿ ಸೇರಿ 14 ಜನ ಪ್ರಯಾಣಿಕರನ್ನು ಹತ್ಯೆಗೈದಿದ್ದಾರೆ. ಕರಾಚಿಯಿಂದ ಗ್ವಾದಾರ್ ಗೆ ತೆರಳುತ್ತಿದ್ದ 6 ಬಸ್ಸುಗಳನ್ನು ಹೆದ್ದಾರಿ ಮಧ್ಯೆ ತಡೆದ ಉಗ್ರರ ತಂಡ, ಬಸ್ಸಲ್ಲಿದ್ದವರನ್ನು ಕೆಳಕ್ಕಿಳಿಸಿ ಗುಂಡಿನ ಮಳೆಗೆರೆದಿದೆ.

ಉಗ್ರರು ಅರೆಸೇನಾ ಪಡೆಯ ಸೈನಿಕರಂತೆ ಸಮವಸ್ತ್ರ ಧರಿಸಿದ್ದರು. ಹೀಗಾಗಿ, ಸೈನಿಕರೇ ಬಸ್ಸುಗಳನ್ನು ತಪಾಸಣೆಗೆಂದು ತಡೆಯುತ್ತಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರಲ್ಲಿ ನೌಕಾಪಡೆ ಮತ್ತು ಕರಾವಳಿ ರಕ್ಷಕ ಪಡೆಯ ತಲಾ ಒಬ್ಬರು ಸೇರಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos