ದೊಡ್ದನಲ್ಲೂರಹಳ್ಳಿಯಲ್ಲಿ 12ನೇ ಗುರುಪೂರ್ಣಿಮೆ

ದೊಡ್ದನಲ್ಲೂರಹಳ್ಳಿಯಲ್ಲಿ 12ನೇ ಗುರುಪೂರ್ಣಿಮೆ

ಸೂಲಿಬೆಲೆ, ಜು. 16 : ಇಂದಿನ ಜೀವನದ ಜಂಜಾಟದಲ್ಲಿ ಮಾನಸಿಕ ನೆಮ್ಮದಿ ದೊರೆಯಬೇಕಾದರೆ ದೇವಾಲಯಗಳು ಮತ್ತು ದೇವರ ಸಾನಿಧ್ಯದಿಂದ ಮಾತ್ರ ಸಾಧ್ಯ ಎಂದು ದೊಡ್ದನಲ್ಲೂರಹಳ್ಳಿ ರವಿಸುತ ಟ್ರಸ್ಟ್ ಅಧ್ಯಕ್ಷ ಡಾ: ಡಿ.ಎಲ್ ವೀರ ಬ್ರಹ್ಮಚಾರ್ ಹೇಳಿದರು.

ಹೊಸಕೋಟೆ ತಾಲೂಕಿನ ದೊಡ್ದನಲ್ಲೂರಹಳ್ಳಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ 12ನೇ ವರ್ಷದ ಗುರುಪೂರ್ಣಿಮೇ ಕಾರ್ಯಕ್ರಮ ದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.

ದೇವರಿಗಾಗಿ ನಾವು ಹುಡುಕಾಟದಲ್ಲಿ ಇದ್ದೇವೆ ನಮ್ಮಲ್ಲೇ ದೇವರು ಇದ್ದಾನೆ, ಆತ್ಮ ಸಾಕ್ಷಿಯಿಂದ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು ಎಂದು ಹೇಳಿದರು.

ಅಜ್ಞಾನ ದಿಂದ ಜ್ಞಾನದ ಕಡೆಗೆ ಕರೆದುಕೊಂಡು ಹೋಗುವವರೇ ಗುರು ಇಂಥಹ ಗುರುವಿನ ಸ್ಮರಣೆ ಮಾಡುವುದೇ ಗುರುಪೂರ್ಣಿಮೆ ವಿಶೇಷವಾಗದೇ.  ವೇದವ್ಯಾಸರ ಹುಣ್ಣಿಮೆ ಎಂದಲೂ ಕರೆಯುತ್ತಾರೆ.

ಅಭಯ ಶನೇಶ್ವರ ಸ್ವಾಮಿಯ 17ನೇ ವರ್ಷದ ವಾರ್ಷಿಕೋತ್ಸವ, ಶ್ರೀಕಲ್ಯಾಣ ವೆಂಕಟೇಶ್ವರ ಸ್ವಾಮಿಯ, ಪಂಚಮುಖಿ ಲಿಂಗೇಶ್ವರಸ್ವಾಮಿ, ತ್ರಿಪಾದ ಗಾಯತ್ರಿ ದೇವಿಯ 5ನೇ ವರ್ಷದ ವಾರ್ಷಿಕೋತ್ಸವ, ಭದ್ರಮಹಾಕಾಳಿದೇವಿಯ 7ನೇ ವರ್ಷದ ವಾರ್ಷಿಕೋತ್ಸವ, ರವಿಸುತ ಭವನದ 3ನೇ ವರ್ಷದ ವಾರ್ಷಿಕೋತ್ಸವ ನೆಡೆಯಿತು.

ಸತ್ಯನಾರಾಯಣ ಸ್ವಾಮಿಯ ಕಥೆ ಪಾರಾಯಣ ಜರುಗಿತು. ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.

ಭಕ್ತಿ ಗೀತ ಗಾಯನ ಕಾರ್ಯಕ್ರಮ ಪ್ರವಚನ ಜರುಗಿತು.

ಗುರುಪೂರ್ಣಿಮೆ ಅಂಗವಾಗಿ ಅಷ್ಟ ಮಹಾಲಕ್ಷ್ಮಿ ಪೂಜೆ, ಸಪ್ತಮಾತೃಕೆ ಪೂಜೆ, ನವದುರ್ಗಾಪೂಜೆ,ನವದುರ್ಗಾಪೂಜೆ, ಅಷ್ಟೋತ್ಯರ ಶತ ಕಲಸಾರಾದನೆ ,ನವಗ್ರಹ ಶಾಂತಿ,ಹೋಮ ಹವನ ಕಾರ್ಯಕ್ರಮ ನೆಡೆಯಿತು.

ನಾರಾಯಣಸ್ವಾಮಿ ವ್ರತ

ನಾರಾಯಣಸ್ವಾಮಿ ವ್ರತವನ್ನು ದೇವಾಲಯದಲ್ಲಿ ಮಾಡುವುದು ತುಂಬಾ ಶ್ರೇಷ್ಠವಾದ  ಆಚರಣೆ ಸತ್ಯನಾರಾಯಣ ವ್ರತದ ನಂತರ ಕಡ್ಡಾಯವಾಗಿ ಪ್ರಸಾದ ಸ್ವೀಕಾರ ಮಾಡಬೇಕು. ಡಾ:  ಡಿ.ಎಲ್.ವೀರ ಬ್ರಹ್ಮಚಾರ್ ಗುರೂಜಿ ಕೇಶವಮೂರ್ತಿ ಚಾರ್ಯ ವೃಂದದವರು ಪೂಜಾ ಕಾರ್ಯಕ್ರಮ ನೆರವೇರಿಸಿದರು.

ಟ್ರಸ್ಟ್ ಪದಾಧಿಕಾರಿಗಳಾದ ಡಿ.ಎಲ್

ಶ್ರೀನಿವಾಸ ಚಾರ್,ಡಿ.ಎಲ್.ನಂಜುಂಡಚಾರ್, ಎಸ್.ಎನ್. ಶಿವಕುಮಾರ್,ಎಸ್.ಆರ್.ಪ್ರಭಾಕರ್ಚಾರ್,ಎಸ್.ಎನ್. ಹರೀಶ್,ವಿ.ಸಂದೀಪ್,ಪ್ರಕಾಶ್,ಸಿ

ನಂಜಪ್ಪಚಾರ್, ಮರಿಯಪ್ಪ,ಧನುಷ್,ನ್ಯಾನಮೂರ್ತಪ್ಪ,ಬಸವರಾಜ್, ವಾಬಸಂದ್ರ ನಾಗೇಶ್, ಯನಗುಂಟೆ ನಾರಾಯಣ ಸ್ವಾಮಿ, ಗುತ್ತಿಗೆದಾರ ಮುನಿರತ್ನಪ್ಪ,ಇತರರು ಪೂಜೆ ಯಲ್ಲಿ ಪಾಲ್ಗೊಂಡಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos