ಲಿಂಗೈಕ್ಯ ಡಾ.ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 112ನೇ ಜಯಂತಿ

ಲಿಂಗೈಕ್ಯ ಡಾ.ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 112ನೇ ಜಯಂತಿ

ತುಮಕೂರು, ಏ. 1, ನ್ಯೂಸ್ ಎಕ್ಸ್ ಪ್ರೆಸ್: ನಡೆದಾಡುವ ದೇವರು ಎಂದೇ ಜನಾನುರಾಗಿಯಾಗಿದ್ದ ಲಿಂಗೈಕ್ಯ ಡಾ.ಶ್ರೀ,ಶ್ರೀ ಶಿವಕುಮಾರ ಮಹಾಸ್ವಾಮಿಗಳ 112ನೇ ಜಯಂತಿ ಹಿನ್ನೆಲೆಯಲ್ಲಿ ಸೋಮವಾರ ತುಮಕೂರು ಸಿದ್ದಗಂಗಾಕ್ಷೇತ್ರದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು. ಮಠದ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಯವರು ಶಿವಕುಮಾರಮಹಾಸ್ವಾಮೀಜಿಯ ಅವರ ಗುರುಗಳಾದ ಉದ್ದಾನಶ್ರೀಗಳ ಗದ್ದುಗೆಗೆ ಹಾಗೂ ಡಾ.ಶಿವಕುಮಾರಮಹಾಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಿದರು. ಸಿದ್ದಗಂಗಾಶ್ರೀಗಳ 112ನೇ ಜಯಂತಿ ಹಿನ್ನೆಲೆಯಲ್ಲಿ ಮಠಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಹರಿದುಬರುತ್ತಿದ್ದು, ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸುತ್ತಿದ್ದಾರೆ. ಏತನ್ಮಧ್ಯೆ ಮಠದಲ್ಲಿ 112 ಶಿಶುಗಳಿಗೆ ಶಿವಕುಮಾರಶ್ರೀಗಳ ನಾಮಕರಣ ನಡೆಯಿತು. ಗದ್ದುಗೆ ಮುಂಭಾಗ ವಿಭೂತಿ, ರುದ್ರಾಕ್ಷಿ ಹಾಗೂ ಧಾನ್ಯಗಳಿಂದ ಶ್ರೀಗಳ ಭಾವಚಿತ್ರ ಬಿಡಿಸಲಾಗಿತ್ತು. ಗದ್ದುಗೆಯನ್ನು ವಿವಿಧ ಪುಪ್ಪಗಳಿಂದ ಅಲಂಕರಿಸಲಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos