ಮುಂಬೈ ಉಗ್ರರ ದಾಳಿಗೆ 11 ವರ್ಷ

ಮುಂಬೈ ಉಗ್ರರ ದಾಳಿಗೆ 11 ವರ್ಷ

ಮುಂಬೈ, ನ.26 : ರಾಷ್ಟ್ರದ ವಾಣಿಜ್ಯ ರಾಜಧಾನಿಯ ಸಪ್ತತಾರಾ ತಾಜ್ ಹೋಟೆಲ, ಸಿಎಸ್ಟಿ ರೈಲು ನಿಲ್ದಾಣ, ಭಾಬಾದ್ ಹೌಸ್ ಮತ್ತಿತರೆಡೆ ಗುಂಡಿನ ದಾಳಿ ನಡೆಸಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರನ್ನು ಬಲಿ ಬಲಿಪಡೆದ 26/11ರ ಮುಂಬೈ ಭಯೋತ್ಪಾದಕರ ದಾಳಿಯ ಕರಾಳ ನೆನಪಿಗೆ ಇಂದು 11 ವರ್ಷ.
ಭಯೋತ್ಪಾದಕರ ವಿರುದ್ದ ಹೋರಾಟದಲ್ಲಿ ಹುತಾತ್ಮರಾದ ಯೋಧರಿಗೆ ದೇಶದ ವಿವಿಧೆಡೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ.ಉಪ ರಾಷ್ಟ್ರಪತಿ ಡಾ.ಎಂ.ವೆಂಕಯ್ಯ ನಾಯ್ಡು , ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್ , ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.
ತಾಯ್ನಾಡಿನ ರಕ್ಷಣೆಗಾಗಿ ಭದ್ರತಾ ಪಡೆಗಳ ತ್ಯಾಗವನ್ನು ನಾವು ಸದಾ ಸ್ಮರಿಸುತ್ತೇವೆ. ಹುತಾತ್ಮರ ಕುಟುಂಬಗಳಿಗೆ ನಾವು ನೈತಿಕ ಬೆಂಬಲ ನೀಡುತ್ತೇವೆ ಎಂದು ಗಣ್ಯರು ಹೇಳಿದ್ದಾರೆ. ದಕ್ಷಿಣ ಮುಂಬೈ ಪೊಲೀಸ್ ಜಿಮ್ಖಾನಾದಲ್ಲಿ 26/11 ಪೊಲೀಸ್ ಸ್ಮಾರಕಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ , ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಅನೇಕ ಗಣ್ಯರು ಹುತಾತ್ಮರ ಗೌರವಾರ್ಥ ಪುಷ್ಪ ನಮನ ಸಲ್ಲಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos