11 ತಿಂಗಳ ಹಸೂಗೂಸು ಸಾವು

11 ತಿಂಗಳ ಹಸೂಗೂಸು ಸಾವು

ಬಾಗಲಕೋಟೆ, ಅ. 31 : ಸತತ ಮಳೆ ಇದ್ದ ಹಿನ್ನಲೆ ಶಿಥಿಲಗೊಂಡಿದ್ದ ಮನೆಯ ಮೇಲ್ಛಾವಣಿ ಕುಸಿದು 11 ತಿಂಗಳ ಹಸುಗೂಸು ಮೃತಪಟ್ಟು, ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ತೆರದಾಳ ತಾಲೂಕಿನ ತಮದಡ್ಡಿಯಲ್ಲಿ ಸಂಭವಿಸಿದೆ. ಅಚಲ ಬುಜಬಲಿ ತಿಮ್ಮಣ್ಣವರ ಮೃತಪಟ್ಟ ಮಗು. ತಾಯಿ ಅಕ್ಷತಾ ಬುಜಬಲಿಲ ತಿಮ್ಮಣ್ಣವರ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ರಾತ್ರಿ ಮನೆಯಲ್ಲಿ ನಾಲ್ವರು ಮಲಗಿದ್ದರು. ಬೆಳಗ್ಗಿನ ನ ಜಾವ 4 ಗಂಟೆ ಸುಮಾರಿಗೆ ಇಬ್ಬರು ಎದ್ದು ಹೊರಗಡೆ ಬಂದಿದ್ದರು. ಆದರೆ ತಾಯಿ, ಮಗು ಇನ್ನೂ ಮಲಗಿದ್ದರು. ಈ ಸಂದರ್ಭದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಪರಿಣಾಮ ಮಗು ಮೃತಪಟ್ಟು ತಾಯಿ ತೀವ್ರವಾಗಿ ಗಾಯಗೊಂಡಿದ್ದಾರೆ.ಈ ಘಟನೆ ತೇರದಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos