`108 ಅಂಬುಲೆನ್ಸ್’ ಬೆಂಕಿಗಾಹುತಿ

`108 ಅಂಬುಲೆನ್ಸ್’ ಬೆಂಕಿಗಾಹುತಿ

ಬೆಂಗಳೂರು, ಮೇ. 8, ನ್ಯೂಸ್ ಎಕ್ಸ್ ಪ್ರೆಸ್: ಆನೇಕಲ್ ಗೆ ಹೊಂದಿಕೊಂಡಿರುವ ತಮಿಳುನಾಡಿನ ಅಡುವೈ ಕುರುಚಿ ಗ್ರಾಮದಲ್ಲಿ, ರೋಗಿಒಬ್ಬರನ್ನ ಹೊತ್ತೊಯುತ್ತಿದ್ದ 108 ಅಂಬುಲೆನ್ಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಅಂಬುಲೆನ್ಸ್ ಸುಟ್ಟು ಹೋದ ಘಟನೆ ನಡೆದಿದೆ.

ಅಂಬುಲೆನ್ಸ್ ನಲ್ಲಿದ್ದ ರೋಗಿ ಹಾಗೂ ಅಂಬುಲೆನ್ಸ್ ಪೈಲೆಟ್, ವೈದ್ಯಕೀಯ ಸಿಬ್ಬಂದಿ ಪಾರಾಗಿದ್ದು, ರೋಗಿ ಹಾಗೂ ಅವರ ಸಂಬಂಧಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅಂಬುಲೆನ್ಸ್ ನಲ್ಲಿದ್ದ ರೋಗಿ ಹಾಗೂ ಆತನ ಸಂಬಂಧಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಆತನನ್ನು ಬೇರೊಂದು ವಾಹನಗಳಲ್ಲಿ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿ ನಂದಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos