101 ಕೋಟಿ ಒಡತಿ ಹೇಮಾ ಮಾಲಿನಿ

101 ಕೋಟಿ ಒಡತಿ ಹೇಮಾ ಮಾಲಿನಿ

ಮಥುರಾ,ಮಾ. 27, ನ್ಯೂಸ್ ಎಕ್ಸ್ ಪ್ರೆಸ್ : ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮಥುರಾ ಕ್ಷೇತ್ರದಲ್ಲಿ ಕಣಕ್ಕಿಳಿಯುತಿರುವ ಹಿರಿಯ ನಟಿ ಹೇಮಾ ಮಾಲಿನಿ ಅವರು ತಮ್ಮ ಆಸ್ತಿ ವಿವರ ನೀಡಿದ್ದಾರೆ.

ಬಂಗಲೆ ಆಭರಣ, ನಗದು, ಷೇರುಗಳು, ಹಾಗೂ ಡಿಪಾಸಿಟ್ ಮಾಡಲಾಗಿರುವ ಹಣ ಸೇರಿದಂತೆ ಒಟ್ಟು 101 ಕೋಟಿ ಆಸ್ತಿ ಹೇಮಾ ಮಾಲಿನಿ ಬಳಿಯಿದೆಯಂತೆ.

2014 ರಲ್ಲಿ ಹೇಮಮಾಲಿನಿ ತಮ್ಮ ಬಳಿ 66 ಕೋಟಿ ಆಸ್ತಿ ಇತ್ತು ಎಂದು ನಾಮಪತ್ರ ಸಲ್ಲಿಕೆ ವೇಳೆ ವಿವರ ನೀಡಿದ್ದರು. ಆದರೆ ಇದೀಗ ಅವರ ಆಸ್ತಿ 101 ಕೋಟಿಗೆ ಏರಿಕೆ ಯಾಗಿದೆ. ಇನ್ನೂ ಹೇಮಮಾಲಿನಿಯ ಪತಿ ಧಮೇಂದ್ರ ಸಿಂಗ್ ಡಿಯೋಲ್ ಬಳಿ 12.30 ಕೋಟಿ ಆಸ್ತಿ ಇದೆಯಂತೆ. ಹೇಮಾಮಾಲಿನಿಯ ಬಳಿ 2011ರಲ್ಲಿ ಖರೀದಿಸಿದ  33.62 ಲಕ್ಷ ಮೌಲ್ಯದ ಮರ್ಸಿಡಿಸ್ ಕಾರು, 2005ರಲ್ಲಿ ಖರೀದಿಸಿದ 4.75 ಲಕ್ಷ ಮೌಲ್ಯದ ಟೊಯೋಟಾ ಕಾರಿದೆಯಂತ

ಫ್ರೆಶ್ ನ್ಯೂಸ್

Latest Posts

Featured Videos