1000ರೂ ನೋಟ್ ಬ್ಯಾನ್ ಆಗಿ 2 ವರ್ಷ ಕಳೆದರು ನಡೀತಿದೆ ಎಕ್ಸ್​ಚೇಂಜ್​ ದಂಧೆ

1000ರೂ ನೋಟ್ ಬ್ಯಾನ್ ಆಗಿ 2 ವರ್ಷ ಕಳೆದರು ನಡೀತಿದೆ ಎಕ್ಸ್​ಚೇಂಜ್​  ದಂಧೆ

ಬೆಂಗಳೂರು, ಮಾ. 30, ನ್ಯೂಸ್ ಎಕ್ಸ್ ಪ್ರೆಸ್: 1000ರೂ ಮತ್ತು ಹಳೆಯ 500 ನೋಟ್ ಬ್ಯಾನ್ ಆಗಿ 2 ವರ್ಷ ಕಳೆದರು ಕೂಡ ಬ್ಲಾಕ್ ಅಂಡ್ ವೈಟ್ ದಂಧೆ ಮಾತ್ರ ಇನ್ನು ನಿಂತಿಲ್ಲ.

1000,500  ಹಳೆಯ ನೋಟುಗಳನ್ನ ಹೊಸ ನೋಟುಗಳಾಗಿ ಪರಿವರ್ತನೆ ಮಾಡುವ ಯತ್ನ ನಡೆಯುತ್ತಲೇ ಇದೆ. ಹೀಗೆ ಹಳೆಯ ನೋಟನ್ನ ಪರಿವರ್ತನೆ ಮಾಡಲು ಯತ್ನಿಸುತ್ತಿದ್ದ 5 ಆರೋಪಿಗಳನ್ನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು 1 ಕೋಟಿಯಷ್ಟು 500, 1000 ರೂಪಾಯಿ ನೋಟುಗಳನ್ನ ವೈಟ್ ಮಾಡಲು ಯತ್ನಿಸುತ್ತಿದ್ದರು.

ಮತ್ತೆ ಹಳೆ ನೋಟುಗಳು ಚಲಾವಣೆಗೆ ಬರುತ್ತವೆ ಎಂದು ನಂಬಿಸಿದ್ದರು. ಅಲ್ಲದೇ 1 ಕೋಟಿ ಹಳೆ ನೋಟಿಗೆ 25 ಲಕ್ಷ ಹಣ ಬರುತ್ತೆ ಎಂದು ವಂಚನೆ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ವಿನೋದ್ ಸೇರಿದಂತೆ 4 ಜನ ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 1 ಕೋಟಿಯಷ್ಟು ಹಣವನ್ನ ಜಪ್ತಿ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos