ತನಿಖೆ ಮುಗಿಯುವವರೆಗೂ 1 ರೂ. ಕೂಡ ಕೊಡುವುದಿಲ್ಲ: ಸಿಎಂ

ತನಿಖೆ ಮುಗಿಯುವವರೆಗೂ 1 ರೂ. ಕೂಡ ಕೊಡುವುದಿಲ್ಲ: ಸಿಎಂ

ಮಂಗಳೂರು, ಡಿ. 25: ಮಂಗಳೂರಿನಲ್ಲಿ ಇತ್ತೀಚೆಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದಲ್ಲಿ ನಡೆದಿದ್ದ ಫೈರಿಂಗ್ ನಲ್ಲಿ ಇಬ್ಬರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ಕೊಡುವುದಾಗಿ ಸಿಎಂ ಘೋಷಿಸಿದ್ದರು.  ಆದರೆ, ಗೋಲಿಬಾಲ್ ಘಟನೆಯಲ್ಲಿ ಮೃತಪಟ್ಟವರು ಅಪರಾಧಿಗಳೆಂದು ಸಾಬೀತಾದರೆ ಅವರ ಪರಿಹಾರ ಮೊತ್ತವನ್ನು ವಾಪಸ್ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ತನಿಖೆಯಲ್ಲಿ ಮೃತಪಟ್ಟವನ್ನು ಅಪರಾಧಿಗಳೆಂದು ಸಾಬೀತಾದರೆ ಅವರಿಗೆ ಪರಿಹಾರ ನೀಡುವುದು ಅಕ್ಷಮ್ಯ ಅಪರಾಧವಾಗುತ್ತದೆ. ಹೀಗಾಗಿ ಸದ್ಯಕ್ಕೆ ಪರಿಹಾರ ಮೊತ್ತವನ್ನು ಅವರ ಕುಟುಂಬಕ್ಕೆ ನೀಡುವುದಿಲ್ಲ. ತನಿಖೆ ಮುಗಿಯುವವರೆಗೂ 1 ರೂಪಾಯಿ ಕೂಡ ಕೊಡುವುದಿಲ್ಲ ಎಂದು ಸಿಎಂ ಹೇಳಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ಸದ್ಯ ತನಿಖೆ ಮುಗಿಯುವ ತನಕ ಪರಿಹಾರ ನೀಡುವುದಿಲ್ಲ. ಒಂದು ವೇಳೆ ಮೃತರು ಅಪರಾಧಿಗಳಾಗದೇ ಇದ್ದಲ್ಲಿ ಖಂಡಿತ ಅವರ ಕುಟುಂಬ ವರ್ಗಕ್ಕೆ ಪರಿಹಾರ ನೀಡಲಾಗುತ್ತೆ ಎಂದು ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos