ಶ್ರೀ ರಾಮ ವಂಶಸ್ಥರು ಇದ್ದಾರಾ?

ಶ್ರೀ ರಾಮ ವಂಶಸ್ಥರು ಇದ್ದಾರಾ?

ಜೈಪುರ, ಆ. 12 : “ಶ್ರೀರಾಮ ವಿಶ್ವರೂಪಿ. ಜಗತ್ತಿನ ಎಲ್ಲಾ ಕಡೆ ಆತನ ವಂಶಸ್ಥರು ಇದ್ದಾರೆ. ನನ್ನದು ರಘುವಂಶ ಕುಟುಂಬ. ಶ್ರೀರಾಮನ ಪುತ್ರ ಕುಶ ನಮ್ಮ ಪೂರ್ವಜ” ಎಂದು ರಾಜಸ್ಥಾನದ ಬಿಜೆಪಿ ಸಂಸದೆ ದಿಯಾ ಕುಮಾರಿ ಅವರು ನಮ್ಮದು ಶ್ರೀರಾಮಚಂದ್ರನ ವಂಶ ಎಂದು ಟ್ವೀಟ್ ಮಾಡಿದ್ದಾರೆ.
ಶುಕ್ರವಾರ ಅಯೋಧ್ಯೆ ಕುರಿತು ವಿಚಾರಣೆ ನಡೆಸುತ್ತಿದ್ದ ವೇಳೆ “ಶ್ರೀರಾಮನ (ರಘುವಂಶಸ್ಥರು) ಎಲ್ಲಿದ್ದಾರೆ?” ಎಂದು ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಪೀಠ ಪ್ರಶ್ನಿಸಿತ್ತು. ಇದಕ್ಕೆ ಬಿಜೆಪಿ ಸಂಸದೆ ಪ್ರಿತಿ ಕ್ರಿಯೆ ನೀಡಿ, ಜಗತ್ತಿನ ಎಲ್ಲಾ ಕಡೆ ಆತನ ವಂಶಸ್ಥರು ಇದ್ದಾರೆ. ಮನುಸ್ಮೃತಿ, ವಂಶವೃಕ್ಷ ಹಾಗೂ ವಂಶಾವಾಹಿ ದಾಖಲೆಗಳನ್ನು ಆಧಾರವಾಗಿ ಇಟ್ಟುಕೊಂಡೇ ತಾವು ಪ್ರತಿಪಾದನೆ ಮಾಡುತ್ತಿರುವುದು ದಿಯಾ ಹೇಳಿಕೊಂಡಿದ್ದಾರೆ. ರಾಮ ನಮ್ಮೆಲ್ಲ ರ ನಂಬಿಕೆಯ ದೈವ. ಜನ್ಮಭೂಮಿಗೆ ಸಂಬಂಧಿಸಿದ ಪ್ರಕರಣ ಕುರಿತು ಕೋರ್ಟ್ ತ್ವರಿತ ವಿಚಾರಣೆ ನಡೆಸಿ ತೀರ್ಪು ನೀಡಬೇಕು ಎಂದು ದಿಯಾ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ್ದಾರೆ.
ಅಲ್ಲದೆ ನಮ್ಮ ಕುಟುಂಬ ಕುಶನ ವಂಶವೃಕ್ಷ ಹೊಂದಿದೆ ಎನ್ನುವುದಕ್ಕೆ ದಾಖಲೆಗಳು ಬೇಕಾದರೆ ನಾವು ನೀಡುತ್ತೇವೆ. ಆದರೆ ಅಯೋಧ್ಯೆ ಪ್ರಕರಣದ ಮಧ್ಯೆ ಬಂದು ಮುನ್ನಡೆ ಪಡೆಯಲು ನಾವು ಇಚ್ಛಿಸುವುದಿಲ್ಲ ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos