ವಿರೋಧ ಪಕ್ಷಗಳಿಗೆ ಹಿನ್ನಡೆ..! ಮೊದಲು ವಿವಿಪ್ಯಾಟ್​ ಎಣಿಕೆ ಸಾಧ್ಯವಿಲ್ಲ ಎಂದ ಆಯೋಗ

ವಿರೋಧ ಪಕ್ಷಗಳಿಗೆ ಹಿನ್ನಡೆ..! ಮೊದಲು ವಿವಿಪ್ಯಾಟ್​ ಎಣಿಕೆ ಸಾಧ್ಯವಿಲ್ಲ ಎಂದ ಆಯೋಗ

ಬೆಂಗಳೂರು, ಮೇ.22, ನ್ಯೂಸ್‍ ಎಕ್ಸ್ ಪ್ರೆಸ್‍:  ವಿವಿಪ್ಯಾಟ್​ ಸ್ಪಿಪ್​ಗಳನ್ನು ಮೊದಲು ಎಣಿಕೆ ಮಾಡಿದ ನಂತರ ಇವಿಎಂ ಮತಗಳನ್ನು ಎಣಿಕೆ ಮಾಡಬೇಕು ಎಂಬ ವಿರೋಧ ಪಕ್ಷಗಳ ಆಗ್ರಹವನ್ನು ಚುನಾವಣಾ ಆಯೋಗ ತಳ್ಳಿ ಹಾಕಿದೆ.  ಹೀಗಾಗಿ ವಿರೋಧ ಪಕ್ಷಗಳಿಗೆ ಭಾರೀ ಹಿನ್ನಡೆಯಾಗಿದೆ.ನಿನ್ನೆ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ, ಇವಿಎಂನ ಮತಗಳನ್ನು ಎಣಿಕೆ ಮಾಡುವ ಮೊದಲು ವಿವಿಪ್ಯಾಟ್​ ಸ್ಲಿಪ್​ಗಳನ್ನು ಎಣಿಕೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದವು. ಇದರ ಜೊತೆಗೆ ಅವರು ವಿವಿಪ್ಯಾಟ್​ ಸ್ಲಿಪ್​ ಮತ್ತು ಇವಿಎಂನಲ್ಲಿ ಮತ ಎಣಿಕೆಯಲ್ಲಿ ಶೇ.100ರಷ್ಟು ಪಕ್ಕಾ ಹೊಂದಾಣಿಕೆಯಾಗಿರುವುದನ್ನು ಖಚಿತಪಡಿಸಿದ ನಂತರವೇ ಫಲಿತಾಂಶ ಪ್ರಕಟಿಸಬೇಕು ಎಂದು ಡಿಮ್ಯಾಂಡ್‍ ಮಾಡಿದ್ದವು.

‘ಕಂಟ್ರೋಲ್‍ ರೂಂ’ಗೆ ಮಾಹಿತಿ ನೀಡಲು ಸೂಚನೆ

ವಿರೋಧ ಪಕ್ಷಗಳ ನಾಯಕರ ಸಭೆ ವೇಳೆ ಈ ಬೇಡಿಕೆಯನ್ನು ಚುನಾವಣಾ ಆಯೋಗ ಒಪ್ಪಿಕೊಂಡಿತ್ತು. ಆದರೆ, ಇವತ್ತುನಡೆದ ಮತ್ತೊಂದು ಸಭೆಯ ನಂತರ ಆಯೋಗ ಈ ಬೇಡಿಕೆಯನ್ನು ತಿರಸ್ಕರಿಸಿದೆ. ಸ್ಟ್ರಾಂಗ್​ ರೂಂನ ಸಂಗ್ರಹಣೆಯಲ್ಲಿನ ದೂರು, ಭದ್ರತಾ ಸಮಸ್ಯೆ, ಅಭ್ಯರ್ಥಿಗಳಿಂದ ನೇಮಕಗೊಂಡ ಏಜೆಂಟ್​ಗಳು ಸ್ಟ್ರಾಂಗ್​ ರೂಮ್​ ಪ್ರವೇಶ, ಸಿಸಿಟಿವಿ ನಿರ್ವಹಣೆ, ಇವಿಎಂಗಳ ಪ್ರತಿ ಚಲನೆ, ಎಣಿಕೆ ಸಮಯದಲ್ಲಿ ಕೇಳಿಬರುವ ಯಾವುದೇ ದೂರುಗಳನ್ನು ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಜೊತೆಗೆ ನಿಯಂತ್ರಣ ಸಂಪರ್ಕ ಸಂಖ್ಯೆಯನ್ನು ಪ್ರಕಟಿಸಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos