ಬೆಂಗಳೂರಲ್ಲಿ ನಡೆಯಲಿರುವ ಏರೋ ಇಂಡಿಯಾ ಶೋಗೆ ಭಾರೀ ಬಿಗಿ ಭದ್ರತೆ

  • In State
  • February 18, 2019
  • 164 Views
ಬೆಂಗಳೂರಲ್ಲಿ  ನಡೆಯಲಿರುವ ಏರೋ ಇಂಡಿಯಾ ಶೋಗೆ ಭಾರೀ ಬಿಗಿ ಭದ್ರತೆ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯುವ ಏರೋ ಇಂಡಿಯಾ ಶೋಗೂ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.

ಯಲಹಂಕ ಏರ್ ಪೊರ್ಸ್ ವಾಯುನೆಲೆ ಒಳ ಮತ್ತು ಹೊರ ಎರಡು ಕಿ.ಮೀ ಸುತ್ತಮುತ್ತ ಸಿಸಿಟಿವಿ ಅಳವಡಿಸಲಾಗಿದೆ ನಗರದಲ್ಲಿ ಹೊಸದಾಗಿ ಯಾರ್ಯಾರು ವಾಸವಿದ್ದಾರೆ? ಅವರ ಏನು ವೃತ್ತಿ? ಯಾವ ಮೂಲದವರು ಎನ್ನುವ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಬೆಂಗಳೂರಿನ ವಿಭಾಗದಲ್ಲಿನ ಠಾಣೆಗಳಿಗೆ ಮಾಹಿತಿ ಕಲೆ ಹಾಕುವಂತೆ ಸೂಚನೆ ನೀಡಲಾಗಿದೆ.

ಬೆಂಗಳೂರು ಪೊಲೀಸರಿಗೆ ಇಂಟಲಿಜೆನ್ಸ್​ ಬ್ಯೂರೋ, ಸ್ಟೇಟ್ಸ್ ಇಂಟಲಿಜೆನ್ಸ್ ಮತ್ತು ಏರ್ ಶೋ ಇಂಟಲಿಜೆನ್ಸ್ ರಕ್ಷಣೆ ಕಾರ್ಯಾಚಾರಣೆಯಲ್ಲಿ ಕೈಜೋಡಿಸಲಿದ್ದಾರೆ. ನಗರದ ಸುತ್ತ ಮುತ್ತಲಿನ ಪಿಜಿ, ಅಪಾರ್ಟ್ಮೆಂಟ್ ಹಾಗೂ ಹೊಟೇಲ್ ರೆಸ್ಟೋರೆಂಟ್ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಏರ್ ಪೋರ್ಸ್ ಒಳಗಡೆ ಮತ್ತು ಹೊರಗಡೆ ಸಿಐಎಸ್​ಎಫ್​ನಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಇದೆ ಫೆ.20ರಿಂದ ಶುರುವಾಗುವ ಏರ್​ ಶೋಗೆ ಈಗಾಗಲೇ ವಿಮಾನಗಳು ರಿಹರ್ಸಲ್ ಆರಂಭಿಸಿವೆ. ಈಗಾಗಲೇ ಭಾರತೀಯ ವಾಯುಸೇನೆ ಸೇರುತ್ತಿರುವ ಮೊದಲ ಯುದ್ಧ ವಿಮಾನ ರಫೇಲ್ ಕೂಡ ಯಲಹಂಕ ವಾಯುನೆಲೆಗೆ ಬಂದಿಳಿದಿದ್ದು, ತನ್ನ ಸಾಮರ್ಥ್ಯ ಪ್ರದರ್ಶಿಸಲು ತಯಾರಾಗಿದೆ. ಉಳಿದಂತೆ ಸೂರ್ಯಕಿರಣ್, ಸ್ವದೇಶಿ ನಿರ್ಮಿತ ಸಾರಸ್, ಯಕೋವ್ ಲೇವ್ಸ್, ಎಇಡಬ್ಲ್ಯು ಅಂಡ್ ಸಿ, ಎಚ್​ಎಎಲ್​ ನಿರ್ಮಿತ ಎಎಲ್​ಎಚ್​ ಹೆಲಿಕಾಪ್ಟರ್, ಎಂಐ 17, ಎಂಐ 17 ವಿ5 ಹೆಲಿಕಾಪ್ಟರ್​ಗಳು ಪ್ರದರ್ಶನ ನೀಡಲಿವೆ.

ಫ್ರೆಶ್ ನ್ಯೂಸ್

Latest Posts

Featured Videos