ಪೆಟ್ರೋಲ್, ಡೀಸೆಲ್ ದರ ಬೆಲೆ ನೋಡಿ

ಪೆಟ್ರೋಲ್, ಡೀಸೆಲ್ ದರ ಬೆಲೆ ನೋಡಿ

ಬೆಂಗಳೂರು, ಏ. 6 : ಸೋಮವಾರ ಬೆಂಗಳೂರು ಸೇರಿ ದೇಶದೆಲ್ಲೆಡೆ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ರಾಜ್ಯ ಬಜೆಟ್ಗಳ ಬಳಿಕ ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏ.1 ರಂದು ಹೆಚ್ಚಾಗಿದೆ. ನಂತರ ಮತ್ತೆ ತೈಲ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಂಗಳೂರಿನಲ್ಲಿ ಒಂದು ಲೀ. ಪೆಟ್ರೋಲ್ ದರ 73.55 ರೂ. ಇದ್ದು, ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ದರ ಪ್ರಸ್ತುತ 69.59 ರೂ. ಇದೆ. ಇನ್ನು, ಚೆನ್ನೈನಲ್ಲಿ 72.28 ರೂ. ಕೋಲ್ಕತ 73.30 ರೂ.,ವಾಣಿಜ್ಯ ನಗರಿ ಮುಂಬಯಿನಲ್ಲಿ 76.31 ರೂ. ಇದೆ. ಬೆಂಗಳೂರಿನಲ್ಲಿ ಒಂದು ಲೀಟರ್ ಡೀಸೆಲ್ ದರ 65.96 ರೂ. ಇದ್ದು, ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 62.29 ರೂ., ಚೆನ್ನೈನಲ್ಲಿ 65.71 ರೂ., ಕೋಲ್ಕತದಲ್ಲಿ 65.62 ರೂ., ಹಾಗೂ ಮುಂಬಯಿನಲ್ಲಿ 66.21 ರೂ. ಇದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲ ದರ 2,053 ರೂ. ಇದೆ.

ಫ್ರೆಶ್ ನ್ಯೂಸ್

Latest Posts

Featured Videos