ಢಾಕಾ: ಅಗ್ನಿ ದುರಂತ, 75ಕ್ಕೂ ಹೆಚ್ಚು ಜನ ಸಜೀವ ದಹನ..!

ಢಾಕಾ: ಅಗ್ನಿ ದುರಂತ, 75ಕ್ಕೂ ಹೆಚ್ಚು ಜನ ಸಜೀವ ದಹನ..!

ಢಾಕಾ: ಬಾಂಗ್ಲಾ ದೇಶದ ರಾಜಧಾನಿ ಢಾಕಾದಲ್ಲಿನ ರಾಸಾಯನಿಕ ಉಗ್ರಾಣವೊಂದರಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕದಲ್ಲಿ 75ಕ್ಕೂ ಹೆಚ್ಚು ಜನ ಮೃತಪಟ್ಟು ಅನೇಕರು ತೀವ್ರ ಗಾಯಗೊಂಡಿದ್ದಾರೆ.

ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ರಾಸಾಯನಿಕ ಮತ್ತು ಪ್ಲಾಸ್ಟಿಕ್ ಉಗ್ರಾಣದಲ್ಲಿ ಬೆಂಕಿ ಸಂಭವಿಸಿ ದಹನಶೀಲ ವಸ್ತುಗಳು ಅಗ್ನಿ ಕೆನ್ನಾಲಿಗೆಯೊಂದಿಗೆ ಸುತ್ತಮುತ್ತಲ ಪ್ರದೇಶವನ್ನು ವ್ಯಾಪಿಸಿದ ಪರಿಣಾಮವಾಗಿ ಅನೇಕ ಕಟ್ಟಡಗಳು ಮತ್ತು ಮನೆಗಳಿಗೆ ತೀವ್ರ ಹಾನಿಯಾಗಿವೆ.

ಹಳೆಯ ಢಾಕಾದ ಅತ್ಯಂತ ಜನಸಂದನೀಯ ಚೌಕಿಬಜಾರ್ ಪ್ರದೇಶದ ಮಸೀದಿ ಹಿಂಬಾಗ ಇರುವ ಹಾಜಿ ವಹಾದ್ ಮ್ಯಾನ್ಷನ್ ಕಟ್ಟಡದ ನೆಲೆಮನೆಯಲ್ಲಿದ್ದ ರಾಸಾಯನಿಕ ದಾಸ್ತಾನು ಕೊಠಡಿಯಲ್ಲಿ ಅಗ್ನಿ ಕಾಣಿಸಿಕೊಂಡು ಐದು ಅಂತಸ್ತುಗಳ ಕಟ್ಟಡವನ್ನು ವ್ಯಾಪಿಸಿದೆ.

ಅಲ್ಲದೆ ಪಕ್ಕದಲ್ಲಿ ಮದುವೆ ನಡೆಯುತ್ತಿದ್ದ ಸಮುದಾಯ ಭವನ ಸೇರಿದಂತೆ ಇತರ ನಾಲ್ಕು ಕಟ್ಟಡಗಳಿಗೂ ಬೆಂಕಿಯ ಕೆನ್ನಾಲಿಗೆ ಚಾಚಿತು.ಈ ಪ್ರದೇಶದಲ್ಲಿ ಇದ್ದ ಇತರ ರಾಸಾಯನಿಕ ಉಗ್ರಾಣಗಳಿಗೂ ಬೆಂಕಿ ತಗುಲಿ ಪರಿಸ್ಥಿತಿ ಮತ್ತಷ್ಟು ಭೀಕರವಾಯಿತು ಎಂದು ಅಗ್ನಿಶಮನ ಕಾರ್ಯಾಚರಣೆಯಲ್ಲಿ ತೊಡಗಿದ ಅಧಿಕಾರಿಗಳು ತಿಳಿಸಿದ್ದಾರೆ.

37ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳ ನೆರವಿನೊಂದಿಗೆ ಸಿಬ್ಬಂದಿ ಹರಸಾಹಸದ ಮೂಲಕ ಬೆಂಕಿ ರೌದ್ರಾವತರವನ್ನು ನಿಯಂತ್ರಣಕ್ಕೆ ತಂದರು.

 ಬೆಂಕಿ ದುರಂತಕ್ಕೀಡಾದ ಕಟ್ಟಡಗಳಿಂದ ಈವರೆಗೆ 75ಕ್ಕೂ ಹೆಚ್ಚು ಶವಗಳನ್ನು ಹೊರ ತೆಗೆಯಲಾಗಿದೆ. ಸುಟ್ಟಗಾಯಗಳಾಗಿರುವ ಮತ್ತು ಉಸಿರಾಟದ ತೊಂದರೆ ಅನುಭವಿಸುತ್ತಿರುವ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 50ಕ್ಕೂ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದರಲ್ಲಿ ಕೆಲವರ
ಪರಿಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಢಾಕಾ ಮೆಟ್ರೋ ಪಾಲಿಟನ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಯ ಜ್ವಾಲೆಗಳಿಂದ ಹೊತ್ತಿ ಉರಿದ ಕಟ್ಟಡಗಳ ಒಳಗೆ ಸಿಲುಕಿರಬಹುದಾದ ಜನರಿಗಾಗಿ ಶೋಧ ಮುಂದುವರಿದಿದೆ.ಎಂದು ತಿಳಿದು
ಬಂದಿದೆ

ಫ್ರೆಶ್ ನ್ಯೂಸ್

Latest Posts

Featured Videos