‘ಕುಂದಗೋಳ’ ‘ಕೈ’ ತೆಕ್ಕೆಗೆ! ‘ಚಿಂಚೋಳಿ’ ‘ಬಿಜೆಪಿ’ ಮಡಿಲಿಗೆ..!

‘ಕುಂದಗೋಳ’ ‘ಕೈ’ ತೆಕ್ಕೆಗೆ! ‘ಚಿಂಚೋಳಿ’ ‘ಬಿಜೆಪಿ’ ಮಡಿಲಿಗೆ..!

ಬೆಂಗಳೂರು, ಮೇ.23, ನ್ಯೂಸ್‍ ಎಕ್ಸ್ ಪ್ರೆಸ್‍: ತೀವ್ರ ಕುತೂಹಲ ಕೆರಳಿಸಿದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಉಪಚುನಾವಣೆಯ 2 ಕ್ಷೇತ್ರಗಳಲ್ಲಿ ಬಿಜೆಪಿ- ಕಾಂಗ್ರೆಸ್ ಸಮನಾಗಿ ಗೆಲುವು ಸಾಧಿಸಿವೆ. ಕುಂದಗೋಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಜಯಗಳಿಸಿದರೆ, ಚಿಂಚೋಳಿಯಲ್ಲಿ ಬಿಜೆಪಿಯ ಅನಾಶ್ ಜಾಧವ್ ಗೆಲುವು ದಾಖಲಿಸಿದ್ದಾರೆ.

ಚಿಂಚೋಳಿಯಲ್ಲಿ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ 8 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದರೆ, ಸಚಿವ ಶಿವಳ್ಳಿಯವರ ಅಕಾಲಿಕ ನಿಧನದಿಂದ ಎದುರಾದ ಕುಂದಗೋಳದ ಉಪಚುನಾವಣೆಯಲ್ಲಿ ಕುಸುಮಾ ಶಿವಳ್ಳಿ 1452 ಅಲ್ಪ ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos