ಅವ್ಯವಸ್ಥೆ ವಿರುದ್ಧ ಬೀದಿಗಿಳಿದ ಮಕ್ಕಳು

ಅವ್ಯವಸ್ಥೆ ವಿರುದ್ಧ ಬೀದಿಗಿಳಿದ ಮಕ್ಕಳು

ಚಾಮರಾಜನಗರ: ಮೂಲಭೂತ ಸೌಲಭ್ಯಗಳಿಲ್ಲದೆ ಬಾಲಮಂದಿರದಲ್ಲಿ ಅವ್ಯವಸ್ಥೆ, ಇದರಿಂದ ನೊಂದ ಮಕ್ಕಳು ಬೀದಿಗಿಳಿದು ಪ್ರತಿಭಟನೆ ಮಾಡಿ ಜಿಲ್ಲಾಡಳಿತದ ಗಮನ ಸೆಳೆದ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾ ನ್ಯಾಯಾಲಯದ ಆಸುಪಾಸಿನಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ನಡೆಯುತ್ತಿರುವ ಬಾಲ ಮಂದಿರದಲ್ಲಿ ಅವ್ಯವಸ್ಥೆ. ಇವತ್ತು ಸರಿ ಹೋಗಬಹುದು, ನಾಳೆ ಸರಿಹೋಗಬಹುದು ಎಂದು ಕಾದ ಮಕ್ಕಳು ವ್ಯವಸ್ಥೆ ಸರಿ ಹೋಗದ್ದರಿಂದ ಕೊನೆಗೆ ಅವ್ಯವಸ್ಥೆಯನ್ನು ವಿರೋಧಿಸಿ ಬೀದಿಗಳಿದು ಪ್ರತಿಭಟನೆ ನಡೆಸುತಿದ್ದಾರೆ.

ಚಾಮರಾಜನಗರದ ನ್ಯಾಯಾಲಯದ ರಸ್ತೆಯಲ್ಲಿರುವ ಬಾಲ ಮಂದಿರದ ಎದುರುಗಡೆ
20 ಮಕ್ಕಳು ಸುಡು ಬಿಸಿಲಿನಲ್ಲಿ ಕುಳಿತು ಬಾಲ ಮಂದಿರದ ಸೂಪರಿಡೆಂಟೆಂಟ್ ಮತ್ತು ಅಡುಗೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಅವ್ಯವಸ್ಥೆ ಏನಿದೆ ಎಂಬುದನ್ನು ಹೊರ ಹಾಕಿದರು.

ಆದರೆ ಮಕ್ಕಳು ಪ್ರತಿಭಟನೆ ನಡೆಸುತ್ತಿದ್ದರೂ ಕೂಡ ಈ ಕಡೆ ಸೂಪರಿಡೆಂಟೆಂಟ್ ಮತ್ತು ಇನ್ನಿತರ ಸಿಬ್ಬಂದಿ ತಮಗೂ ಮಕ್ಕಳ ಪ್ರತಿಭಟನೆಗೂ ಯಾವುದೇ ಸಂಬಂಧ ಇಲ್ಲದಂತೆ ಇದ್ದು ಬಿಟ್ಟಿದ್ದರು. ಇದರಿಂದ ಬೇಸತ್ತ ಮಕ್ಕಳು ಜಿಲ್ಲಾಡಳಿತ ಭವನಕ್ಕೆ ಕಾಲ್ನಡಿಗೆಯಲ್ಲೇ ತೆರಳಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕೇಂದ್ರದಲ್ಲಿರುವ ಬಾಲ ಮಂದಿರಕ್ಕೆ ಯಾರೂ ಭೇಟಿ ಕೊಡಲ್ಲ, ಈ ಹಿನ್ನಲೆಯಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ, ಸೂಪರಿಡೆಂಟೆಂಟ್ ಅವರ ಇಚ್ಚೆಯಂತೆ ಬರುತ್ತಾರೆ ಹೋಗುತ್ತಾರೆ.ಮತ್ತು
ಇನ್ನಿತರ ಸಿಬ್ಬಂದಿಗಳಯ, ಅಂದರೆ ಅಡಿಗೆಯವರು ಉತ್ತಮ ಗುಣಮಟ್ಟದ ಆಹಾರ ಸಿದ್ದಪಡಿಸಲ್ಲ, ಕೇಳಿದರೆ ಮಕ್ಕಳಿಗೆ ಹೆದರಿಸುತ್ತಾರೆ ಅಂತ ಬಾಲ ಮಂದಿರದ ಮಕ್ಕಳು ನಿರ್ಭಯವಾಗಿ ಮಾಧ್ಯಮದವರ ಮುಂದೆ ತಮಗೆ
ಆಗಿರು ತಂದರೆಯನ್ನು ತೋಡಿಕೊಂಡರು.

ಚಾಮರಾಜನಗರ ಜಿಲ್ಲಾಡಳಿತ ಮುಂದೆ ಬಾಲ ಮಂದಿರದ ಮಕ್ಕಳು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಹಾಜರಿದ್ದ ಅಡುಗೆಯವರಾದ ಪ್ರೇಮಾ ಮಾತನಾಡಿ, ಬಾಲಮಂದಿರಲ್ಲಿ ಉತ್ತಮವಾದ ವಾತಾವರಣ ಇದೆ, ಅಡುಗೆ ಚೆನ್ನಾಗಿ ಮಾಡಿ ಹಾಕುತ್ತೇವೆ, ಮಕ್ಕಳಿಗೆ ಯಾರೋ ಏನೋ ಹೇಳಿ ಕೊಟ್ಟಿದ್ದಾರೆ. ಅದಕ್ಕೆ ಅವರು ಈ ರೀತಿಯಾಗಿ ಪ್ರತಿಭಟನೆ ಮಾಡುತ್ತಿದ್ದಾರೆ
ಎಂದು ಹೇಳಿದರು.

ಬಾಲ ಮಂದಿರದ ಮಕ್ಕಳು ದಿಢೀರ್ ಅಂತ ಜಿಲ್ಲಾಡಳಿತ ಭವನದ ಮುಂದೆ ಧರಣಿ ಕುಳಿತಿದ್ದ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಭೇಟಿ ನೀಡಿ ಮಕ್ಕಳಿಂದ ಬಾಲಮಂದಿರದ ಸಮಸ್ಯೆಗಳನ್ನು ಆಲಿಸಿದರು.

ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಮಕ್ಕಳ ರಕ್ಷಣಾಧಿಕಾರಿ ಟಿ.ಎಂ.ಜಯಶೀಲ, ಮಕ್ಕಳ ಅಹವಾಲು ಆಲಿಸಿ, ಬಾಲಮಂದಿರದ ಸಿಬ್ಬಂದಿಗಳ ಕರ್ತವ್ಯ ಲೋಪವಾಗಿದ್ದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಭರವಸೆ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos