ನೆಲ್ಲಿಕಾಯಿಯಿಂದ ಬಾಯಲ್ಲಿ ನೀರು..!

ನೆಲ್ಲಿಕಾಯಿಯಿಂದ ಬಾಯಲ್ಲಿ ನೀರು..!

ನೆಲ್ಲಿಕಾಯಿ (Gooseberry) ಅಂದರೆ ಯಾರಿಗಿಷ್ಟಾ ಇಲ್ಲಾ ಹೇಳಿ ಎಲ್ಲರ ಬಾಯಿಯಲ್ಲಿ ನೀರು ಬರಿಸುತ್ತದೆ. ನೆಲ್ಲಿಕಾಯಿ ನಾಲಿಗೆಗೂ ರುಚಿಕರ ಆರೋಗ್ಯಕ್ಕೂ ಹಿತರಕರವಾಗಿದೆ ಈ ನೆಲ್ಲಿ. ಬೇಯಿಸಿದ ನೆಲ್ಲಿ ಹುಣಿಸೆ ರಸದಲ್ಲಿ ಕೊಳೆ ಹಾಕಿದ ನೆಲ್ಲಿ ಊಪ್ಪಿನಕಾಯಿ ತೊಕ್ಕು, ಮುರಬ್ಬು, ಚಟ್ನಿ, ಗೊಜ್ಜು ,ಕಡಿ,ಮಜ್ಜಿಗೆ ,ನೆಲ್ಲಿ ಸಾಂಬಾರು, ನೆಲ್ಲಿ ಚಿತ್ರಾನ್ನ ಮಾಡಿ ನಾಲಿಗೆಯಲಿ ನೀರೂರಿಸುವ ಒಗರು ಸಿಹಿ ನೆಲ್ಲಿ ವಾವ್! ಅಲ್ವಾ..!? ನೆಲ್ಲಿ ಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಹಾಗೂ ಇದರಲ್ಲಿ ಪ್ರೋಟೀನು ನಾರು ,ಲವಣದ ಅಂಶವೂ ಕೂಡ ಇದೆ. ರಕ್ತದಲ್ಲಿ ಕೊಬ್ಬು ಹೆಚ್ಚಾಗಿದ್ದಲ್ಲಿ ನೆಲ್ಲಿಕಾಯಿ ಒಣಗಿಸಿ ಪುಡಿ ಮಡಿ. ಸ್ವಲ್ಪ ಸಕ್ಕರೆ ಪಾಕದೊಂದಿಗೆ ಬೆರೆಸಿ ಪ್ರತಿ ದಿನ ಒಂದು ಚಮಚದಷ್ಟು ಬರೀ ಹೊಟ್ಟೆಯಲ್ಲಿ ತೆಗೆದುಕೊಂಡರೆ ಕೊಬ್ಬು ಸ್ಥಿಮಿತದಲ್ಲಿ ಇರುತ್ತದೆ.
ಕೆಯನ್ನು ತಡೆಯಲು ಪ್ರತಿದಿನ ಸ್ವಲ್ಪ ಆಮ್ಲ ಜ್ಯೂಸ್ ಕುಡಿದರೆ ಇದು ದೇಹವನ್ನು ತಂಪಾಗಿಡುತ್ತದೆ.
ಟೀ ಪುಡಿಯೊಂದಿಗೆ ನೆಲ್ಲಿಕಾಯಿ ಪುಡಿ ಬೆರಸಿ ಈ ಪೇಸ್ಟ್ ಅನ್ನು ತಲೆಗೆ ಹಚ್ಚುವುದರಿಂದ ಕೂದಲು ಬಲವರ್ಧಕಗೊಳ್ಳುವುದು.
ದೀರ್ಘಕಾಲದ ಮಲಬದ್ಧತೆ ಗುಣವಾಗುವುದು ಮಲಬದ್ದತೆ ಗುಣವಾಗುವುದು ಮಲಬದ್ದತೆ ಸಮಸ್ಯೆಯಿಂದ ತುಂಬಾ ಕಾಲದವರೆಗೆ ಬಳಲುತ್ತಿರುವವರು ಆಮ್ಲ ಜ್ಯೂಸ್ ಕುಡಿದರೆ ಈ ಸಮಸ್ಸೆ ಗುಣಮುಖವಾಗುವುದು.
ನೆಲ್ಲಿಕಾಯಿಯನ್ನು ಜೇನು ಜೊತೆ ತೆಗೆದುಕೊಳ್ಳುತ್ತಾ ಬಂದರೆ ಅಸ್ತಮಾ ಕಾಯಿಲೆ ಕಡಿಮೆಯಾಗುತ್ತದೆ ಉಸಿರಾಟ ತೊಂದರೆ ಅನುಭವಿಸುತ್ತಿರುವವರೆಗೆ ಇದು ಅತ್ಯತ್ತಮವಾದ ಔಷಧಿಯಾಗಿದೆ.
ನೆಲ್ಲಿಕಾಯಿಚೂರನ್ನು ಕೊಬ್ಬರಿಎಣ್ಣೆಯಲ್ಲಿ ನೆನೆಸಿಟ್ಟು ಪ್ತತಿದಿನ ಈ ಎಣ್ಣೆಯನ್ನು ತಲೆಗೆ ಹಚ್ಚಿದರೆ ಕೂದಲ ಸಮಸ್ಸೆಗಳು ಬಗೆಹರಿಯುತ್ತದೆ.
ನೆಲ್ಲಿಕಾಯಿಯ ಜ್ಯೂಸ್ ಅನ್ನು ಪ್ರತಿದಿನ ಎರಡು ಬಾರಿ ಕುಡಿದರೆ ಉರಿ ಮೂತ್ರದ ಸಮಸ್ಸೆ ಇರುವುದಿಲ್ಲ.
ನೆಲ್ಲಿಕಾಯಿ ಜ್ಯೂಸ್ ಅನ್ನು ಜೇನಿಗೆ ಮಿಶ್ರಣ ಮಾಡಿ ಪ್ರತಿದಿನ ಬೆಳಗ್ಗೆ ಕುಡಿಯುತ್ತಾ ಬಂದರೆ ಮುಖದಲ್ಲಿ ಬಿಳಿ ಮಚ್ಚೆ, ಮೊಡವೆ, ಬ್ಯಾಕ್ ಹೆಡ್ಸ್ ಈ ರೀತಿಯ ಯಾವುದೇ ಸಮಸ್ಸೆ ಕಂಡು ಬರುವುದಿಲ್ಲ ಮುಖದ ಕಾಂತಿ ಹೆಚ್ಚುವುದು

ಫ್ರೆಶ್ ನ್ಯೂಸ್

Latest Posts

Featured Videos