ಸಂಕಲ್ಪ ತೊಟ್ಟಲ್ಲಿ ಡೆಂಗ್ಯೂ ನಿರ್ಮೂಲ

ಸಂಕಲ್ಪ ತೊಟ್ಟಲ್ಲಿ ಡೆಂಗ್ಯೂ  ನಿರ್ಮೂಲ

ಬೆಳ್ತಂಗಡಿ, ಜು. 27 : ಡೆಂಗ್ಯೂನಿಂದ ಶ್ರೀಮಂತರು ಅನಕ್ಷರಸ್ಥರೆನ್ನದೆ ಸ್ವಚ್ಛತೆಯೆಡೆಗೆ ಸಂಕಲ್ಪ ತೊಟ್ಟಲ್ಲಿ ಮಾತ್ರ ಕಾಯಿಲೆ ಸಂಪೂರ್ಣ ನಿರ್ಮೂಲನೆ ಸಾಧ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಅನೇಕರ ಜೀವ ಹಾನಿಗೆ ಡೆಂಗ್ಯೂ ಕಾರಣವಾಗುತ್ತಿದೆ. ತ್ಯಾಜ್ಯ ಸೇರಿದಂತೆ ಒಡೆದ ಪಾತ್ರೆ, ಪ್ಲಾಸ್ಟಿಕ್ ಪಾತ್ರ ಎಲ್ಲೆಂದರಲ್ಲಿ ಎಸೆಯುವುದರಿಂದ ನೀರು ನಿಂತು ಕ್ರಿಮಿಗಳು ಉತ್ಪತಿಯಾಗಿ ಆ ಮೂಲಕ ಡೆಂಗ್ಯೂ ಹರಡುತ್ತಿರುವುದು ದೃಢಪಟ್ಟಿದೆ.
ರೋಗವನ್ನ ನಾವೇ ಆಹ್ವಾನಿಸಿಕೊಳ್ಳುತ್ತಿರುವುದನ್ನು ದೂರವಾಗಿಸುವುದರಿಂದಲೇ ಭಾರತದಲ್ಲಿ ಸ್ವಚ್ಛ ಭಾರತ ಆಂದೋಲ ಹಮ್ಮಿಕೊಳ್ಳುತ್ತಿರುವ ಉದ್ದೇಶ. ಬಡವರಿಂದ ಹಿಡಿದು ವಿದ್ಯಾವಂತರವರೆಗೆ ಸಣ್ಣಮಕ್ಕಳಿಂದ ವಯೋವೃದ್ಧರವೆಗೆ ಸ್ವಚ್ಛತೆ ಸಂಕಲ್ಪತೊಡಬೇಕಿದೆ.

ಫ್ರೆಶ್ ನ್ಯೂಸ್

Latest Posts

Featured Videos