ರಸ್ತೆ ವಿಸ್ತರಣೆಗೆ ಅಡಚಣೆ: ಐತಿಹಾಸಿಕ ಮಸೀದಿ ಸ್ಥಳಾಂತರ!

ರಸ್ತೆ ವಿಸ್ತರಣೆಗೆ ಅಡಚಣೆ: ಐತಿಹಾಸಿಕ ಮಸೀದಿ ಸ್ಥಳಾಂತರ!

ನಗಾನ್, ಏ. 26, ನ್ಯೂಸ್ ಎಕ್ಸ್ ಪ್ರೆಸ್:  ಪುರಾತನ ವಾಸ್ತುಶೈಲಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಾಸ್ತು ಶಿಲ್ಪಿಗಳು ಮುಂದಾಗಿದ್ದು ಐತಿಹಾಸಿಕ 100 ವರ್ಷ ಹಳೇಯ ಮಸೀದಿಯನ್ನ ಸ್ಥಳಾಂತರ ಮಾಡುತ್ತಿದ್ದಾರೆ. ಇಲ್ಲಿನ 100 ವರ್ಷದ ಹಳೆಯ ಮಸಿದಿಯೊಂದನ್ನ ಮೂಲ ಸ್ಥಾನದಿಂದ ಮತ್ತೊಂದು ಸ್ಥಳಕ್ಕೆ ಯಾವುದೇ ರಿತಿ ಹಾನಿಯಾಗದಂತೆ ಸ್ಥಳಾಂತರ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 37ರಲ್ಲಿ ಕಾಮಗಾರಿ ನಡೆಯುತ್ತಿದ್ದು, ಚುತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಹೀಗಾಗಿ ರಸ್ತೆಯ ಪಕ್ಕದಲ್ಲೇ ಇದ್ದ ಮಸೀದಿಯನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸ್ಥಳಾಂತರ ಮಾಡಲು ನಿರ್ಧಾರ ಮಾಡಲಾಗಿದೆ. ಹರಿಯಾಣ ಮೂಲದ ಕಂಪನಿ ಈ ಮಸೀದಿ ಸ್ಥಳಾಂತರ ಕಾರ್ಯದ ಜವಾಬ್ದಾರಿ ಹೊತ್ತಿದ್ದು, ಸುಮಾರು 100 ಜನ ಈ ಕಾರ್ಯದಲ್ಲಿ ತೊಡಗಿದ್ದಾರೆ. 2 ಹಂತದಲ್ಲಿ ಮಸೀದಿ ಸ್ಥಳಾಂತರ ಕಾರ್ಯ ನಡೆಯಲಿದ್ದು, ಇಲ್ಲಿಯವರೆಗೆ ಅರ್ಧದಷ್ಟು ಕಾರ್ಯ ಪೂರ್ಣಗೊಂಡಿದೆ ಎಂದು ಇಂಜಿನಿಯರ್​​​ ಒಬ್ಬರು ತಿಳಿಸಿದ್ದಾರೆ. ಸ್ಥಳೀಯರೊಬ್ಬರು ಹೇಳುವಂತೆ ಈ ಮಸೀದಿ ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯದ ಸಂಕೇತವಾಗಿದೆ. 1950ರಲ್ಲಿ ಭೂಕಂಪ ಸಂಭವಿಸಿದ್ದರೂ ಈ ಮಸೀದಿಗೆ ಯಾವುದೇ ಹಾನಿಯಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos