ಮೈತ್ರಿ ಸರ್ಕಾರ: ಸಿಎಂ-ಡಿಸಿಎಂ ಮಹತ್ವದ ಜಂಟಿ ಸುದ್ದಿಗೋಷ್ಠಿ

ಮೈತ್ರಿ ಸರ್ಕಾರ: ಸಿಎಂ-ಡಿಸಿಎಂ ಮಹತ್ವದ ಜಂಟಿ ಸುದ್ದಿಗೋಷ್ಠಿ

ಬೆಂಗಳೂರು, ಜು. 8: ಮೈತ್ರಿ ಸರ್ಕಾರದ ಅಳಿವು-ಉಳಿವಿನ ಆಟ ಕೊನೆಯ ಹಂತಕ್ಕೆ ತಲುಪಿದೆ. 14 ಜನ ಶಾಸಕರ ರಾಜೀನಾಮೆ ಬಳಿಕ ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರು ಶತಪಥ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರದ ಮುಂದಿನ ನಿರ್ಣಯಗಳ ಕುರಿತು ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಡಾ.ಜಿ ಪರಮೇಶ್ವರ್ ಮಹತ್ವದ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಸರ್ಕಾರದಲ್ಲಿ ನಡೆಯುತ್ತಿರುವ ಹೈ ಡ್ರಾಮಾಗಳು ಕ್ಷಣಕೊಂದು ತಿರುವು ಪಡೆಯುತ್ತಿದೆ. ಅಸಮಾಧಾನಿತರನ್ನು ಮನವೊಲಿಸಲು ಮುಂದಾಗಿರುವ  ಸಚಿವರು ಪದತ್ಯಾಗಕ್ಕೂ ಸಿದ್ಧರಾಗಿ ಸರ್ಕಾರ ರಕ್ಷಣೆಗೆ ಮುಂದಾಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ಈ ಬಗ್ಗೆ ಅಧಿಕೃತ ನಿರ್ಧಾರ ಹೊರಬೀಳಲಿದ್ದು, ಬಳಿಕ ಸಿಎಂ, ಡಿಸಿಎಂ ಸುದ್ದಿಗೋಷ್ಠಿಯಲ್ಲಿ ರಾಜಕೀಯ ಬೆಳವಣಿಗೆ ಕುರಿತು ಮಾಹಿತಿ ನೀಡಲಿದ್ದಾರೆ.

ಈ ಜಂಟಿ ಸುದ್ದಿಗೋಷ್ಠಿಯಲ್ಲಿ ಕೆಸಿ ವೇಣುಗೋಪಾಲ್ ಹಾಗೂ ಸಿದ್ದರಾಮಯ್ಯ ಕೂಡ ಉಪಸ್ಥಿತರಿರಲಿದ್ದಾರೆ.

ಇದಕ್ಕೂ ಮುನ್ನ ಡಿಸಿಎಂ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಿಎಂ ಕುಮಾರಸ್ವಾಮಿಗೆ ಕಾಂಗ್ರೆಸ್ ನಾಯಕರು ತರಾಟೆ ತೆಗೆದುಕೊಂಡ ಘಟನೆಯೂ ನಡೆದಿದೆ.  ಕುಮಾರಸ್ವಾಮಿ ಸ್ವಯಂಕೃತಪರಾಧಕ್ಕೆ ಈ ಸ್ಥಿತಿ ಬಂದಿದೆ. ಕಾಂಗ್ರೆಸ್ ಶಾಸಕರಿಗೆ ಅನುದಾನ ಕೊಡಲಿಲ್ಲ. ಅಲ್ಲದೇ ಎಲ್ಲಾ ಇಲಾಖೆಯಲ್ಲೂ ಸೂಪರ್ ಸಿಎಂ ರೇವಣ್ಣ ಮೂಗು ತೂರಿಸಿದರು. ನಿಮ್ಮ ಕುಟುಂಬದವರೇ ರಾಜ್ಯಭಾರ ಮಾಡಿದ್ದರಿಂದ ಶಾಸಕರು ಸಿಟ್ಟಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಸಿಎಂ ವಿರುದ್ಧ ಆರೋಪದ ಮಳೆ ಸುರಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos