ಉಚಿತ ಶಸ್ರ ಚಿಕಿತ್ಸಾ ಶಿಬಿರ

ಉಚಿತ ಶಸ್ರ ಚಿಕಿತ್ಸಾ ಶಿಬಿರ

ಬೆಂಗಳೂರು, ಡಿ. 30: ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ರೋಟರಿ ಬೆಂಗಳೂರು ಉತ್ರರ ಇವರ ಸಂಯುಕ್ತ ಆಶ್ರಯದಲ್ಲಿ ಜ. 26 ರಿಂದ  ಫೆ. 8 ರವರೆಗೆ ಸೀಳು ತುಟಿ, ಸೀಳು ಅಂಗಗಳ, ಸುಟ್ಟ ಗಾಯಗಳಿಂದ ಉಂಟಾದ ವಿರೂಪಗಳ ಉಚಿತ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಆದಿ ಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದು ವಿವಿ ಪ್ರಾಂಶುಪಾಲ ಡಾ. ಎಂ.ಜಿ ಶಿವರಾಮ ತಿಳಿಸಿದರು.

ಸುದ್ದಿ ಗೋಷ್ಟಿ ಯಲ್ಲಿ ಮಾತನಾಡಿ, ಈ ಶಿಬಿರದಲ್ಲಿ ಭಾಗವಹಿಸುವ ಮಕ್ಕಳು ಮೂರು  ವರ್ಷ ಮೆಲ್ಪಟ್ಟಿರಬೇಕು. ಇವರಿಗೆ ಶಸ್ತ್ರಚಿಕಿತ್ಸೆ, ಊಟ ವಸತಿ ಸೌಲಭ್ಯ ಉಚಿತವಾಗಿ ಕಲ್ಪಿಸಲಾಗಿದೆ ಎಂದರು.  ದೇಶದಲ್ಲಿ ಒಂದು ಸಾವಿರ ಮಕ್ಕಳು ಜನಿಸಿದರೆ ಅದರಲ್ಲಿ ಒಂದು ಮಗು ಈ ತೊಂದರೆಗೆ ಒಳಗಾಗುವ ಸಾಧ್ಯ ತೆ ಇದೆ ಎಂದು ತಿಳಿಸಿದರು.

ಅಮೇರಿಕದ ರೋಟೋಪ್ಲಾಸ್ಟ್ ಅಂತರಾಷ್ಟ್ರೀಯ ಸಂಸ್ಥೆಯ 3೦ ತಜ್ಞರ ತಂಡ ಶಸ್ತ್ರಚಿಕಿತ್ಸೆ ಮಾಡಲಿದ್ದರೆ ಈಗಾಗಲೇ ಶಿಬಿರದಲ್ಲಿ ಪಾಲ್ಗೊಳ್ಳಲು 8೦ ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಳೆದ ಆರು ವರ್ಷದಿಂದ ಈ ಶಿಬಿರ ಹಮ್ಮಿಕೊಳ್ಳುತ್ತಾ ಬರಲಾಗಿದೆ ಎಂದು ವಿವರಿಸಿದರು.

ಸುದ್ದಿಗೋಷ್ಡಿಯಲ್ಲಿ  ಶಿವುಕುಮಾರ್ , ಎಂಜಿ ಎನ್ ಮಹಾದೇವ ಗೌಡ, ವಿನೋದ ಕುಮಾರ್, ಆಸ್ಪತ್ರೆಯ ಅಧೀಕ್ಷಕ, ಡಾ.ಪಿ.ಜಿ ಸಾಗರ್, ಆಡಳಿತಾಧಿಕರಿ ಕೆ.ಆರ್. ವಿಜಯಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos