RCEP ಒಪ್ಪಂದದಿಂದ ರೈತರ ಕುಟುಂಬಗಳು ಸರ್ವ ನಾಶವಾಗಲಿದೆ

RCEP ಒಪ್ಪಂದದಿಂದ ರೈತರ ಕುಟುಂಬಗಳು ಸರ್ವ ನಾಶವಾಗಲಿದೆ

ದೊಡ್ಡಬಳ್ಳಾಪುರ, ನ. 4: ಒಪ್ಪಂದಕ್ಕೆ ಸಹಿ ಮಾಡಿದರೆ ದೇಶದ 10 ಕೋಟಿಗಿಂತಲೂ ಅಧಿಕ ರೈತರು ಮತ್ತು ಕೃಷಿಕೂಲಿ ಕಾರ್ಮಿಕ ಕುಟುಂಬಗಳು ಸರ್ವ ನಾಶವಾಗಲಿವೆ ಎಂದು ಪ್ರಾಂತ ರೈತಸಂಘದ ಮುಖಂಡ ಚಂದ್ರ ತೇಜಸ್ವಿ ಅವರು ಹೇಳಿದರು.

ನಗರದ ತಾಲ್ಲೂಕು ಕಚೇರಿಮುಂದೆ ಹಾಲು ಉತ್ಪಾದಕ ಸಹಕಾರ ಸಂಘಗಳ ಸಹಕಾರದಲ್ಲಿ ಪ್ರಾಂತ ರೈತ ಸಂಘ RCEP ಒಪ್ಪಂದವನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದ ಅವರು, ಕೇಂದ್ರ ಸರ್ಕಾರ ಮುಕ್ತ ಆರ್ಥಿಕ ನೀತಿಗಳ ಜಾರಿಗಾಗಿ ನವೆಂಬರ್ 2019 ರಲ್ಲಿ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂ‌ದಕ್ಕೆ ಸಹಿ ಹಾಕಲು ಮುಂದಾಗಿದೆ, ಈ ಒಪ್ಪಂದ ಜಾರಿಯಾದರೆ ನಮ್ಮ ರಾಜ್ಯ ಒಂದರಲ್ಲೇ 35 ರಿಂದ 40 ಲಕ್ಷ ರೈತರು ಕೂಲಿಕಾರರ ಕುಟುಂಬಗಳು ಬೀದಿಗೆ ಬೀಳಲಿದ್ದು, ಈ ಒಪ್ಪಂದ ರೈತರ ಪಾಲಿಗೆ ಮರಣ ಶಾಸನವಾಗಲಿದೆ ಎಂದು ಆಕ್ರೋಷ ವ್ಯಕಗತಪಡಿಸಿದರು. ಮನಮೋಹನ್ ಸಿಂಗ್ ಅವರ ಅವದಿಯಲ್ಲಿ ಸ್ವದೇಶಿ ಜಾಗರಣದ ಹೆಸರಲ್ಲಿ ಇಂತಹ ಒಪ್ಪಂದಗಳನ್ನು ವಿರೋಧ ಮಾಡುತ್ತಿದ್ದ ಬಿಜೆಪಿ ಮತ್ತು ಸಂಘಪರಿವಾರ  ಇಂದು ರೈತರ ಹಿತಾಸಕ್ತಿಯನ್ನು ಕಡೆಗಣಿಸಿ ಯುಪಿಎ ಸರ್ಕಸರಕ್ಕಿಂತಲೂ ವೇಗವಾಗಿ ಇಂತಹ ಜನವಿರೋಧಿ ಒಪ್ಪಂದಗಳನ್ನು ಜಾರಿಗೆ ತರಲು ಹೊರಟಿರುವುದು ವಿಪರ್ಯಾಸವೆಂದ ಅವರು ಈಗಾಗಲೇ ನಮ್ಮ ದೇಶ ಆಮದಿನಿಂದ 14 ಲಕ್ಷ ಕೋಟಿ ಹೊರೆಯನ್ನು ಹೊತ್ತಿದ್ದು, ಕಳೆದ ಆರು ವರ್ಷಗಳಲ್ಲಿ ದೇಶದ ಸಾಲ ದ್ವಿಗುಣಗೊಂಡಿದ್ದು, ಈ ಒಪ್ಪಂದವು ಥೈಲ್ಯಾಂಡ್ ಮತ್ತು ಚೀನಾ ಮುಂತಾದ ದೇಶಗಳಿಗೆ ಸಹಾಯ ಮಾಡುವ ಮೂಲಕ ದೇಶದ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಲಿದೆ ಎಂದು ಆರೋಪಿಸಿದರು.

ನಗರದ ಸಿದ್ದಲಿಂಗಯ್ಯ ವೃತ್ತದಿಂದ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ತಲುಪಿದ ಪ್ರತಿಭಟನಾಕಾರರು ಕೇಂದ್ರೆ  ಸರ್ಕಾರದ ವಿರುದ್ಧ ಘೋಷಣೆ ಕೂಗಿ ಹಾಲು ಉತ್ಪಾದಕರು ಕೇಂದ್ರ ಸರ್ಕಾರ ಸುಂಕ ರಹಿತ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಅವಕಾಶ ನೀಡಬಾರದು, ಸಹಕಾರಿ ಚಳುವಳಿ ವಿರೋಧಿ RCEP ಒಪ್ಪಂದವನ್ನು ಕೈ ಬಿಡಬೇಕು, ಹಾಲು, ಹಾಲಿನ ಉತ್ಪನ್ನ ಮತ್ತು ಕೃಷಿ-ತೋಟಗಾರಿಕಾ ಉತ್ಪನ್ನಗಳ ಮುಕ್ತ ವ್ಯಾಪಾರಕ್ಕೆ ಸಂಬಂಧಿಸಿದಂತೆ ಕೇಂದ್ರೆ ಸರ್ಕಾರದೊಂದಿಗೆ ಮಾತನಾಡಲು ರಾಜ್ಯ ಸರ್ಕಾರ ರೈತರ ನಿಯೋಗ ಕರೆದುಕೊಂಡು ಹೋಗಬೇಕು. ರಾಜ್ಯ ಕೃಷಿ ಬೆಲೆ ಆಯೋಗ ಶಿಪಾರಸ್ಸಿನಂತೆ ಹಾಲಿಗೆ ಬೆಂಬಲ ಬೆಲೆ ನೀಡಬೇಕು ಮತ್ತು ಪಶು ಆಹಾರ ಮತ್ತು ಔಷಧಿಗಳನ್ನು ರಿಯಾಯಿತಿ ದರದಲ್ಲಿ ಹಾಲು ಉತ್ಪಾದಕರಿಗೆ ಪೂರೈಸಬೇಕು  ಎಂಬ ಒತ್ತಾಯಗಳ ಪತ್ರವನ್ನು ತಹಶಿಲ್ದಾರರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ  ಮನವಿ ಸಲ್ಲಿಸಿದರು.

ಈ ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯ್ತಿ ಅದ್ಯಕ್ಷರಾದ ಶಶಿಧರ್, ರಾಜ್ಯ ರೈತ ಸಂಘದ ಮುಖಂಡ ಪ್ರಸನ್ನ ರಾಜ್ಯ ರೈತಶಕ್ತಿಯ ಹೊನ್ನಾಘಟ್ಟ ಮಹೇಶ್ ಮತ್ತು ಸಿಐಟಿಯು ಸಂಘಟನೆಯ ಪಿ.ಎ.ವೆಂಕಟೇಶ್ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos